ಐಫೋನ್ ತಯಾರಕ Foxconn ಈಗ ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಹೊಸ ಕಾರ್ಖಾನೆಯಲ್ಲಿ ಐಫೋನ್ 17 ಉತ್ಪಾದನೆ ಪ್ರಾರಂಭಿಸಿದೆ. ಈ ಫ್ಯಾಕ್ಟರಿಗಾಗಿ ಕಂಪನಿಯು ಸುಮಾರು ರೂ. 25,000 ಕೋಟಿ (2.8 ಬಿಲಿಯನ್ ಡಾಲರ್) ಹೂಡಿಕೆ ಮಾಡಿದೆ.
Foxconn ಈಗಾಗಲೇ ತನ್ನ ಚೆನ್ನೈ ಘಟಕದಲ್ಲಿ ಐಫೋನ್ 17 ತಯಾರಿಸುತ್ತಿದೆ. ಬೆಂಗಳೂರು ಘಟಕ ಕೂಡ ಕಾರ್ಯನಿರ್ವಹಣೆ ಪ್ರಾರಂಭಿಸಿದ ನಂತರ ಭಾರತವು ಆಪಲ್ ಜಾಗತಿಕ ಪೂರೈಕೆ ಸರಪಳಿಯಲ್ಲಿ ಇನ್ನಷ್ಟು ಪ್ರಮುಖ ಸ್ಥಾನ ಪಡೆದಿದೆ.
ಹಿಂದೆ ಚೀನಾ ಭಾರತದಲ್ಲಿ ಕೆಲಸ ಮಾಡುತ್ತಿದ್ದ 300 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ತಕ್ಷಣ ವಾಪಸ್ ಕರೆಸಿಕೊಂಡಿತ್ತು. ಇದರಿಂದ ಉತ್ಪಾದನೆಗೆ ಅಡ್ಡಿ ಉಂಟಾಯಿತು. ಈಗ ಫಾಕ್ಸ್ಕಾನ್ ತೈವಾನ್ ಸೇರಿದಂತೆ ಇತರ ದೇಶಗಳ ತಜ್ಞರನ್ನು ಕರೆಸಿ ಆ ಕೊರತೆಯನ್ನು ನೀಗಿಸುತ್ತಿದೆ.
ಹೈಟೆಕ್ ಅಸೆಂಬ್ಲಿ ಲೈನ್‌ಗಳಲ್ಲಿ ತರಬೇತಿ ನೀಡಲು ಚೀನಾದ ಎಂಜಿನಿಯರ್‌ಗಳ ನೆರವು ದೊರೆಯುತ್ತಿದೆ. ಭಾರತ ಸರ್ಕಾರವು ಅವರಿಗೆ ವೀಸಾ ಸೌಲಭ್ಯ ಒದಗಿಸಿರುವುದರಿಂದ ಉತ್ಪಾದನೆಯಲ್ಲಿ ಅಡ್ಡಿ ಆಗುವುದಿಲ್ಲ.
ಭಾರತ – ಅಮೆರಿಕಾ ವ್ಯಾಪಾರದಲ್ಲಿ ಬದಲಾವಣೆ
- ಭಾರತವು ಈಗ ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್ಫೋನ್ ರಫ್ತು ಮಾಡುವ ದೇಶವಾಗಿದೆ.
- 2024ರ ಏಪ್ರಿಲ್-ಜೂನ್ ಅವಧಿಯಲ್ಲಿ ಅಮೆರಿಕಕ್ಕೆ ಹೋದ “ಮೇಡ್ ಇನ್ ಇಂಡಿಯಾ” ಸ್ಮಾರ್ಟ್ಫೋನ್‌ಗಳ ಪಾಲು 44% ಆಗಿತ್ತು.
- ಕಳೆದ ವರ್ಷ ಇದೇ ಅವಧಿಯಲ್ಲಿ ಅದು ಕೇವಲ 13% ಇತ್ತು.
- ಚೀನಾದ ಪಾಲು ಮಾತ್ರ 61% ರಿಂದ 25% ಕ್ಕೆ ಕುಸಿದಿದೆ.
ಭಾರತದಲ್ಲಿ ಉತ್ಪಾದನೆಯ ಏರಿಕೆ
- ಈ ವರ್ಷದ ಜನವರಿ – ಜೂನ್ ಅವಧಿಯಲ್ಲಿ ಭಾರತದಲ್ಲಿ 2.39 ಕೋಟಿ ಐಫೋನ್‌ಗಳು ತಯಾರಿಸಲ್ಪಟ್ಟಿವೆ.
- ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳಲ್ಲಿ 78% ಭಾರತದಲ್ಲಿ ತಯಾರಾಗಿವೆ.
ಇದು ಹಿಂದಿನ ವರ್ಷದ ಹೋಲಿಕೆಗೆ 53% ಹೆಚ್ಚು.
ರಫ್ತು ಪ್ರಮಾಣ ಹೆಚ್ಚಳ: 2025ರ ಮೊದಲಾರ್ಧದಲ್ಲಿ ಭಾರತದಿಂದ ಹೊರಗೆ ಕಳುಹಿಸಲ್ಪಟ್ಟ ಐಫೋನ್‌ಗಳ ಸಂಖ್ಯೆ 2.28 ಕೋಟಿ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಅದು ಕೇವಲ 1.5 ಕೋಟಿ ಇತ್ತು. ಅಂದರೆ, ಇದು 52% ಹೆಚ್ಚಳ.
ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ: 2025ರ ಜೂನ್ ತ್ರೈಮಾಸಿಕದಲ್ಲಿ ಆಪಲ್ ಕಂಪನಿಯ ಪೂರೈಕೆ 19.7% ಹೆಚ್ಚಳ ಕಂಡಿದೆ. ಆಪಲ್ ಈಗ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 7.5% ಪಾಲು ಹೊಂದಿದೆ. ಮಾರುಕಟ್ಟೆ ನಾಯಕ ವಿವೋ (Vivo) ಕಂಪನಿಯ ಪಾಲು 19% ಇದೆ.
ಭಾರತದಲ್ಲಿ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಆಪಲ್ ಬದ್ಧವಾಗಿದೆ. ಬೆಂಗಳೂರು ಘಟಕ ಪ್ರಾರಂಭವಾಗಿರುವುದು ಭಾರತವನ್ನು ಜಾಗತಿಕ ಐಫೋನ್ ತಯಾರಿಕಾ ಕೇಂದ್ರ ಮಾಡುವತ್ತ ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.