Bengaluru: ಬೆಂಗಳೂರು ಮೂಲದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋಸ್ಪೇಸ್ (FWDA) ಕಂಪನಿಯು ಭಾರತದ ಮೊದಲ ಸ್ವದೇಶಿ ಮಧ್ಯಮ ಎತ್ತರ-ದೀರ್ಘ ಬಾಳಿಕೆಯ (MALE) ಯುದ್ಧವಿಮಾನ ‘ಕಾಲಭೈರವ’ ವನ್ನು (Kalabhairava) ನಿರ್ಮಿಸಿ ಬಿಡುಗಡೆ ಮಾಡಿದೆ. ಸಂಪೂರ್ಣ ಸ್ವಂತ ತಂತ್ರಜ್ಞಾನದ ಆಧಾರದ ಮೇಲೆ ತಯಾರಿಸಲಾದ ಈ ಯುದ್ಧವಿಮಾನ ಈಗ ರಫ್ತಿಗೂ ಸಿದ್ಧವಾಗಿದೆ ಎಂದು ಸಂಸ್ಥೆ ಘೋಷಿಸಿದೆ.
ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ತೇಜಸ್ಕಂಡ ಅವರ ಮಾತಿನಲ್ಲಿ – ಯುದ್ಧದಲ್ಲಿ ವಿದೇಶಿ ತಂತ್ರಜ್ಞಾನ ಮತ್ತು ಡಿಜಿಟಲ್ ಅವಲಂಬನೆ ಅಪಾಯಕಾರಿಯಾಗಿದೆ. ಅದನ್ನು ತಪ್ಪಿಸಲು ಸ್ವದೇಶಿ ಶಸ್ತ್ರಾಸ್ತ್ರಗಳು ಅಗತ್ಯವೆಂದು ಹೇಳಿದರು.
ವೈಶಿಷ್ಟ್ಯಗಳು
- 3,000 ಕಿಮೀ ದೂರ ಹಾರಬಲ್ಲ ಸಾಮರ್ಥ್ಯ
- 30 ಗಂಟೆಗಳವರೆಗೆ ನಿರಂತರ ಹಾರಾಟ
- ಅಗ್ಗದ ಬೆಲೆ – ಅಮೆರಿಕದ MQ-1 Predator ಅಥವಾ ಇಸ್ರೇಲ್‌ನ Searcher Drone ಗಿಂತ ಕಡಿಮೆ ವೆಚ್ಚ
ಒಂದು ಪ್ರಿಡೇಟರ್ ಬೆಲೆಯಲ್ಲಿ ಅನೇಕ ಕಾಲಭೈರವ ಯುದ್ಧವಿಮಾನಗಳನ್ನು ಪಡೆಯಲು ಸಾಧ್ಯ. ಹೀಗಾಗಿ ಯುದ್ಧದ ವೇಳೆಯಲ್ಲಿ ಉತ್ತಮ ದಾಳಿ ಸಂಯೋಜನೆ ಸಾಧ್ಯವೆಂದು ಸುಹಾಸ್ ತಿಳಿಸಿದ್ದಾರೆ.