
ಅಮೆರಿಕದ ಬಿಲಿಯನೇರ್ ಎಲೋನ್ ಮಸ್ಕ್ ಅವರ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಪೇಸ್ಎಕ್ಸ್ ಇತಿಹಾಸ ನಿರ್ಮಿಸಿದೆ. ಬುಧವಾರ ನಡೆದ ಹಾರಾಟದಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್ಶಿಪ್ (SpaceX’s Starship) ಯಶಸ್ವಿಯಾಗಿ ಆಕಾಶಕ್ಕೇರಿತು. ಇದು ಸ್ಟಾರ್ಶಿಪ್‌ನ 10ನೇ ಸಂಯೋಜಿತ ಪರೀಕ್ಷಾ ಹಾರಾಟವಾಗಿದ್ದು, ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿತ್ತು.
ಟೆಕ್ಸಾಸ್ ನ ಬೊಕಾ ಚಿಕಾದಲ್ಲಿರುವ ಸ್ಪೇಸ್ಎಕ್ಸ್‌ನ ಸ್ಟಾರ್ಬೇಸ್ ಸೆಂಟರ್‌ನಿಂದ ಹಾರಾಟ ನಡೆಯಿತು. ಸೂಪರ್ ಹೆವಿ ಬೂಸ್ಟರ್ ನಿಯಂತ್ರಿತವಾಗಿ ಮೆಕ್ಸಿಕೊ ಕೊಲ್ಲಿಯಲ್ಲಿ ಸ್ಪ್ಲಾಶ್ಡೌನ್ ಮಾಡಿತು. ಸೋಮವಾರ ಹಾಗೂ ಮಂಗಳವಾರ ಕೆಟ್ಟ ಹವಾಮಾನ ಮತ್ತು ತಾಂತ್ರಿಕ ತಪಾಸಣೆಗಳ ಕಾರಣ ಉಡಾವಣೆ ಮುಂದೂಡಲ್ಪಟ್ಟಿತ್ತು.
ಈ ಬಾರಿ ಕಂಪನಿ Starship ನ ಮರುಬಳಕೆ ಸಾಧ್ಯತೆಗಳನ್ನು ಪರೀಕ್ಷಿಸಲು ಹೆಚ್ಚು ಗಮನ ಹರಿಸಿತು. ಉಡಾವಣೆಯ ಕೆಲವು ನಿಮಿಷಗಳಲ್ಲೇ ‘ಹಾಟ್ ಸ್ಟೇಜಿಂಗ್’ ಯಶಸ್ವಿಯಾಗಿ ಪೂರ್ಣಗೊಂಡಿತು ಮತ್ತು ಸ್ಟಾರ್ಶಿಪ್ ಸೂಪರ್ ಹೆವಿ ಬೂಸ್ಟರ್‌ನಿಂದ ಸರಿಯಾದ ಸಮಯದಲ್ಲಿ ಬೇರ್ಪಟ್ಟಿತು. ಹಿಂದಿನಂತೆ ನೆಲದ ಮೇಲೆ ಇಳಿಸುವ ಪ್ರಯತ್ನ ಬದಲಾಗಿ, ಬೂಸ್ಟರ್ ಅನ್ನು ನಿಯಂತ್ರಿತವಾಗಿ ಸಮುದ್ರದಲ್ಲಿ ಇಳಿಸಲಾಯಿತು. ಪರೀಕ್ಷೆಯ ಸಮಯದಲ್ಲಿ ಬೂಸ್ಟರ್ ಎಂಜಿನ್ ಮರುಪ್ರಾರಂಭಿಸುವುದು, ಫ್ಲಿಪ್ಪಿಂಗ್, ಬೂಸ್ಟ್ಬ್ಯಾಕ್ ಬರ್ನ್ ಮುಂತಾದ ಕಷ್ಟಕರ ಪ್ರಯೋಗಗಳನ್ನು ನಡೆಸಿತು.
ಸ್ಟಾರ್ಶಿಪ್ ಮೇಲ್ಭಾಗವು ಬಹುತೇಕ ಕಕ್ಷೆಯ ವೇಗ ತಲುಪಿತು. ಮರುಪ್ರವೇಶದ ವೇಳೆ ಅದರ ತಾಪನಿರೋಧಕ ವ್ಯವಸ್ಥೆ ಮತ್ತು ಬಲಿಷ್ಠ ರಚನೆಯನ್ನು ಪರೀಕ್ಷಿಸಲಾಯಿತು. ಭೂಮಿಯ ಮೇಲಿನ ಒಂದು ಬಿಂದುವಿನಿಂದ ಇನ್ನೊಂದಕ್ಕೆ ತ್ವರಿತ ಪ್ರಯಾಣ, ಚಂದ್ರನಿಗೆ ಮಾನವ ಮಿಷನ್ ಹಾಗೂ ಭವಿಷ್ಯದಲ್ಲಿ ಮಂಗಳನಿಗೆ ಮನುಷ್ಯರನ್ನು ಕಳುಹಿಸುವ ಗುರಿಯಲ್ಲಿಯೂ ಇದು ಬಹುಮುಖ್ಯ ಹಂತವಾಗಿದೆ.
Starship 232 ಅಡಿ ಎತ್ತರದ ಸೂಪರ್ ಹೆವಿ ಬೂಸ್ಟರ್ ಹಾಗೂ 171 ಅಡಿ ಎತ್ತರದ ಮೇಲಿನ ಹಂತವನ್ನು ಹೊಂದಿದೆ. ಇದು ಲಿಬರ್ಟಿ ಪ್ರತಿಮೆಯಿಗಿಂತಲೂ ಎತ್ತರವಾಗಿದೆ. ಸೋಮವಾರ ಉಡಾವಣೆಗೂ ಮುನ್ನ ಇಂಧನ ತುಂಬಿಸಲಾಯಿತು, ಆದರೆ ಕೊನೆಯ ಕ್ಷಣದಲ್ಲಿ ಪೂರ್ವಾಭ್ಯಾಸ ಹಾರಾಟ ನಡೆಸಲಾಯಿತು. ಮಂಗಳವಾರವೂ ಹಾರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಭಾನುವಾರ ಲಾಂಚ್ ಪ್ಯಾಡ್‌ನಲ್ಲಿ ಆಮ್ಲಜನಕ ಸೋರಿಕೆ ಪತ್ತೆಯಾದ ಕಾರಣ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಉಡಾವಣೆ ತಡವಾಯಿತು.