
ಅಮೆರಿಕವು ಜಿ7 ಮತ್ತು ನ್ಯಾಟೋ ದೇಶಗಳಿಗೆ ಕರೆ ನೀಡಿದ್ದು, ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಸುಂಕ ವಿಧಿಸಬೇಕು ಎಂದು ಹೇಳಿದೆ.
ಚೀನಾ ಈ ಕ್ರಮವನ್ನು “ಬೆದರಿಕೆ ಮತ್ತು ಆರ್ಥಿಕ ದಬ್ಬಾಳಿಕೆ” ಎಂದು ಕರೆಯಿತು.ಅಮೆರಿಕದ ಒತ್ತಡ ಸಮಸ್ಯೆ ಪರಿಹಾರ ಮಾಡುವುದಿಲ್ಲ ಎಂದು ಚೀನಾ ಎಚ್ಚರಿಸಿದೆ. ಕಾನೂನುಬದ್ಧ ಹಕ್ಕುಗಳಿಗೆ ಹಾನಿಯಾದರೆ ಪ್ರತಿಕ್ರಿಯಾತ್ಮಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
- ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆ ವಕ್ತಾರ ಲಿನ್ ಜಿಯಾನ್ ಹೇಳಿದರು,
- ರಷ್ಯಾ ಸೇರಿದಂತೆ ಇತರ ದೇಶಗಳೊಂದಿಗೆ ಚೀನಾದ ಇಂಧನ ಸಹಕಾರವು ನ್ಯಾಯಸಮ್ಮತ.
- WTO ನಿಯಮಗಳಿಗೆ ಅನುಗುಣವಾಗಿ ಚೀನೀ-ರಷ್ಯಾ ವ್ಯಾಪಾರ ನಡೆಯುತ್ತಿದೆ.
- ಯಾವುದೇ ಮೂರನೇ ವ್ಯಕ್ತಿ ಇದರಲ್ಲಿ ಹಸ್ತಕ್ಷೇಪ ಮಾಡಬಾರದು.
- ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು,
- ರಷ್ಯಾದೊಂದಿಗೆ ಚೀನಾ ವ್ಯಾಪಾರ ಮಾಡುತ್ತಿರುವುದರಿಂದ, ನ್ಯಾಟೋ ದೇಶಗಳು ಚೀನಾದ ಮೇಲೆ ಶೇ.50 ರಿಂದ 100% ವರೆಗೆ ಸುಂಕ ವಿಧಿಸಬೇಕು.
- ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಬೇಕು.
- ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದರು,
- ಯುದ್ಧ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ.
- ನಿರ್ಬಂಧಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತವೆ.