Amravati (Andhra Pradesh): ಆಂಧ್ರ ಪ್ರದೇಶದಲ್ಲಿ ಮತ್ತೊಂದು ಪ್ರಸಿದ್ಧ ಜಾಗತಿಕ ಐಟಿ ಕಂಪನಿಯೊಂದು ತಮ್ಮ ಹೂಡಿಕೆಯನ್ನು ಮುಂದುವರೆಸಲು ಸಜ್ಜಾಗಿದೆ. Google ಅಂಗಸಂಸ್ಥೆ ರೈಡೆನ್ ಇನ್ಫೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 10 ಬಿಲಿಯನ್ ಡಾಲರ್ ವೆಚ್ಚದಲ್ಲಿ ವಿಶಾಖಪಟ್ಟಣಂನಲ್ಲಿ 1,000 ಮೆಗಾವ್ಯಾಟ್ ಸಾಮರ್ಥ್ಯದ ಎಐ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ರೈಡೆನ್ ಸಂಸ್ಥೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಈ ಯೋಜನೆಯ ವಿವರಗಳನ್ನು ಸಲ್ಲಿಸಿದೆ. ಎರಡೂವರೆ ವರ್ಷಗಳಲ್ಲಿ ಮೊದಲ ಹಂತದ ನಿರ್ಮಾಣವನ್ನು ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಸರ್ಕಾರದ ಉನ್ನತ ಅಧಿಕಾರಿಗಳು ಈ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದು, ಅಗತ್ಯ ಅನುಮತಿಗಳು ಮತ್ತು ಪ್ರೋತ್ಸಾಹದ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಈ ಡೇಟಾ ಸೆಂಟರ್ ಏಷ್ಯಾದ ಅತಿ ದೊಡ್ಡದಾಗಿದ್ದು, ಗೂಗಲ್ 52,000 ಕೋಟಿ ರೂ. ಹೂಡಿಕೆ ಮಾಡುವ ಇನ್ನೊಂದು ಬೃಹತ್ ಯೋಜನೆ Vishakhapatnam ನಲ್ಲಿ ನಿರ್ವಹಿಸಲು ಉದ್ದೇಶಿಸಿದೆ. ಮೊದಲು Vishakhapatnam ನಲ್ಲಿ ಸೈಫೈ ಸಂಸ್ಥೆ 16,000 ಕೋಟಿ ರೂ. ಹೂಡಿಕೆಯ ಡೇಟಾ ಸೆಂಟರ್ ಸ್ಥಾಪಿಸಲು ಸರ್ಕಾರದಿಂದ ಅನುಮೋದನೆ ಪಡೆದಿತ್ತು.
ರೈಡೆನ್ ಸಂಸ್ಥೆ ಡೇಟಾ ಸೆಂಟರ್ ಸ್ಥಾಪನೆಗಾಗಿ Vishakhapatnam ನಲ್ಲಿ ಮೂರು ಸ್ಥಳಗಳನ್ನು ಗುರುತಿಸಿದೆ.
- ಆದಿವಿವರಂ: 120 ಎಕರೆ
- ತರಳುವಾಡ: 200 ಎಕರೆ
- ರಂಬಿಲ್ಲಿ ಅಚ್ಯುತಪುರಂ ಕ್ಲಸ್ಟರ್: 160 ಎಕರೆ
ಒಟ್ಟಾರೆ 480 ಎಕರೆ ಭೂಮಿ ಸರ್ಕಾರದಿಂದ ಹಂಚಿಕೆಗೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ನಿರ್ಮಾಣ ಆರಂಭಿಸಿ, ಮೊದಲ ಹಂತವನ್ನು ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯಿದೆ. ಎಲ್ಲಾ ಸ್ಥಳಗಳು ಸಿಗುವುದಾದರೆ ಮಾರ್ಚ್ 2026ರಿಂದ ನಿರ್ಮಾಣ ಪ್ರಾರಂಭವಾಗಿ, ಜುಲೈ 2028 ರಲ್ಲಿ ಕಾರ್ಯಾಚರಣೆ ಆರಂಭಿಸುವ ಗುರಿಯಿದೆ.
ಪ್ರಸ್ತಾವನೆಯ ಪ್ರಕಾರ, ಈ ಡೇಟಾ ಸೆಂಟರ್ಗೆ ಒಟ್ಟು 2,100 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಸ್ಥಳೀಯ ವಿತರಣಾ ಕಂಪನಿಗಳಿಂದ ಈ ವಿದ್ಯುತ್ ಪಡೆಯಲಾಗುವುದು.
- ಆದಿವಿವರಂ: 465 ಮೆಗಾವ್ಯಾಟ್
- ತರಳುವಾಡ: 929 ಮೆಗಾವ್ಯಾಟ್
- ರಂಬಿಲ್ಲಿ: 697 ಮೆಗಾವ್ಯಾಟ್
ಈ ಯೋಜನೆಗೆ ಸಿಂಗಾಪುರ ಮೂಲದ ರೈಡೆನ್ ಇನ್ಫೋಟೆಕ್ ಇಂಡಿಯಾ ಬಹುಪಾಲು ಷೇರುದಾರರಾಗಿದ್ದು, ಅಮೆರಿಕ ಮೂಲದ ಗೂಗಲ್ ಎಲ್ಎಲ್ಸಿಯ ಅಂಗಸಂಸ್ಥೆ ರೈಡೆನ್ ಎಪಿಎಸಿ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ ಕಂಪನಿಯ ಮೂಲಕ ಹೂಡಿಕೆ ಮಾಡಲಿದೆ.