TVS ಮೋಟಾರ್ ತನ್ನ ಜನಪ್ರಿಯ ಬೈಕ್ ರೈಡರ್ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಯುವಕರನ್ನು ಆಕರ್ಷಿಸುವ ವಿನ್ಯಾಸ, ಸುರಕ್ಷತೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಮಾದರಿಯಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ವ್ಯವಸ್ಥೆ ಸೇರಿಸಲಾಗಿದೆ, ಇದರಿಂದ ಹೆಚ್ಚಿನ ವೇಗದಲ್ಲಿಯೂ ಸವಾರನಿಗೆ ನಿಯಂತ್ರಣ ಮತ್ತು ಆತ್ಮವಿಶ್ವಾಸ ನೀಡುತ್ತದೆ.
ರೈಡರ್ ವೈಶಿಷ್ಟ್ಯಗಳು
- ಲಭ್ಯ ರೂಪಾಂತರಗಳು: SXC DD ಮತ್ತು TFT DD
- ಬೆಲೆ: ರೂ. 93,800 ರಿಂದ ರೂ. 95,600 (ಎಕ್ಸ್-ಶೋರೂಂ)
- ಎಂಜಿನ್: 124.8 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 5-ಸ್ಪೀಡ್ ಗೇರ್ಬಾಕ್ಸ್
- ಶಕ್ತಿ: 7,500 RPM ನಲ್ಲಿ 11.2 BHP, 6,000 RPM ನಲ್ಲಿ 11.75 Nm ಟಾರ್ಕ್
- ಗರಿಷ್ಠ ವೇಗ: 99 ಕಿ.ಮೀ/ಗಂ
- ಮೈಲೇಜ್: 1 ಲೀಟರ್ ಪೆಟ್ರೋಲಿಗೆ 56.7 ಕಿ.ಮೀ
- ಸುಧಾರಿತ ಫೀಚರ್ಸ್: LED ಹೆಡ್ಲ್ಯಾಂಪ್, ಇಂಟಿಗ್ರೇಟೆಡ್ DRL, ಸ್ಪೋರ್ಟಿ ಗ್ರಾಫಿಕ್ಸ್
- ಗ್ಲೈಡ್ ಥ್ರೂ ಟೆಕ್ನಾಲಜಿ (GTT) ಮತ್ತು ಸಿಂಗಲ್ ಚಾನಲ್ ABS ಮೂಲಕ ಸುರಕ್ಷತೆ ಮತ್ತು ಸುಗಮ ಸವಾರಿ
ಸ್ಪೋರ್ಟಿ ಲುಕ್ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ, ಟಿವಿಎಸ್ ರೈಡರ್ ದಿನನಿತ್ಯದ ಪ್ರಯಾಣಕ್ಕೆ ಮಿತವ್ಯಯಕಾರಿ ಮತ್ತು ಸುರಕ್ಷಿತ ಆಯ್ಕೆಯಾಗಿದ್ದು, ಯುವಕರಿಗೆ ಆಕರ್ಷಕ ಆಯ್ಕೆಯಾಗಿದೆ.