ರಾಜ್ಮಾ (Rajma) ಅಥವಾ ಕಿಡ್ನಿ ಬೀನ್ಸ್ ಪ್ರೋಟೀನ್, ಫೈಬರ್, ವಿಟಮಿನ್, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇವು ದೇಹದಲ್ಲಿ ಕೊಬ್ಬು ಸಂಗ್ರಹವನ್ನು ತಡೆಯಲು, ತೂಕ ನಿಯಂತ್ರಿಸಲು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಕೆಲವರಿಗೆ ರಾಜ್ಮಾ ತಿನ್ನುವಾಗ ಹೊಟ್ಟೆ ಉಬ್ಬುವುದು, ಜೀರ್ಣ ಸಮಸ್ಯೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಸರಿಯಾಗಿ ಬೇಯಿಸಿ, ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ನೀಡುತ್ತದೆ.
- ರಾಜ್ಮಾದ ಪೋಷಕಾಂಶಗಳು (100 ಗ್ರಾಂಗೆ)
- ಪ್ರೋಟೀನ್: 7.69 ಗ್ರಾಂ
- ಕಾರ್ಬೋಹೈಡ್ರೇಟ್ಸ್: 21.5 ಗ್ರಾಂ
- ನಾರು: 5.4 ಗ್ರಾಂ
- ಕ್ಯಾಲ್ಸಿಯಂ: 46 ಮಿ.ಗ್ರಾಂ
- ಕಬ್ಬಿನಂಶ: 1.38 ಮಿ.ಗ್ರಾಂ
- ಪೊಟ್ಯಾಸಿಯಮ್: 215 ಮಿ.ಗ್ರಾಂ
- ಕ್ಯಾಲೋರಿಗಳು: 123 ಕ್ಯಾಲೋರಿಗಳು
- ಫೋಲೇಟ್ (ವಿಟಮಿನ್ B9): 130 ಮೈಕ್ರೋಗ್ರಾಂ
- ಮೆಗ್ನೀಸಿಯಮ್: 45 ಮಿ.ಗ್ರಾಂ
ರಾಜ್ಮಾದ ಪ್ರಮುಖ ಆರೋಗ್ಯ ಪ್ರಯೋಜನಗಳು
ಉತ್ತಮ ಪ್ರೋಟೀನ್ ಮೂಲ: ಸಸ್ಯಾಹಾರಿಗಳಿಗೆ ರಾಜ್ಮಾ ಉತ್ತಮ ಪ್ರೋಟೀನ್ ಒದಗಿಸುತ್ತದೆ. ಸ್ನಾಯುಗಳ ಬೆಳವಣಿಗೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಸಹಾಯ: ಕಡಿಮೆ ಕೊಬ್ಬು, ಹೆಚ್ಚು ಫೈಬರ್ ಮತ್ತು ಪ್ರೋಟೀನ್ ಇರುವ ರಾಜ್ಮಾ ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ.
ಮಧುಮೇಹ ನಿಯಂತ್ರಣ: ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಕಾರಣದಿಂದ ರಕ್ತ ಸಕ್ಕರೆ ನಿಧಾನವಾಗಿ ಏರಿಕೆಯಾಗುತ್ತದೆ. ಟೈಪ್ 2 ಮಧುಮೇಹ ಇರುವವರಿಗೆ ಉತ್ತಮ.
ಹೃದಯದ ಆರೋಗ್ಯ: ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ರಕ್ತದೊತ್ತಡ ನಿಯಂತ್ರಣಕ್ಕೆ, ಹೃದಯರೋಗದ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಜೀರ್ಣಕ್ರಿಯೆ ಸುಧಾರಣೆ: ಹೆಚ್ಚು ಫೈಬರ್ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ: ಉತ್ಕರ್ಷಣ ನಿರೋಧಕಗಳು, ಫ್ಲೇವನಾಯ್ಡ್ಸ್, ಲಿಗ್ನಾನ್ ಇವುಗಳು ಕೆಲ ಕ್ಯಾನ್ಸರ್‌ಗಳ ಅಪಾಯ ಕಡಿಮೆ ಮಾಡುತ್ತವೆ.
ಮೆದುಳಿಗೆ ಉಪಯೋಗ: ಫೋಲೇಟ್, B-ವಿಟಮಿನ್ ಮತ್ತು ಮೆಗ್ನೀಸಿಯಮ್ ಮೆದುಳಿನ ಕಾರ್ಯ ಮತ್ತು ಮನಸ್ಥಿತಿ ಸುಧಾರಿಸುತ್ತವೆ.
ಮೂಳೆಗಳು ಮತ್ತು ಕೀಲುಗಳ ಆರೋಗ್ಯ: ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮೂಳೆಗಳನ್ನು ಬಲಪಡಿಸುತ್ತವೆ ಮತ್ತು ಆಸ್ಟಿಯೋಪೊರೋಸಿಸ್ ತಡೆಯುತ್ತವೆ.
ರಾಜ್ಮಾದ ಅಡ್ಡಪರಿಣಾಮಗಳು
ವಿಷಕಾರಿ ಪರಿಣಾಮ: ಕಡಿಮೆ ಬೇಯಿಸಿದ ರಾಜ್ಮಾ ವಿಷ (ಫೈಟೊಹೆಮಾಗ್ಗ್ಲುಟಿನಿನ್) ಉಂಟುಮಾಡಬಹುದು.
ಜೀರ್ಣಕ್ರಿಯೆ ಸಮಸ್ಯೆ: ಕೆಲ ಕಬ್ಬಿನಂಶಗಳು ಅನಿಲ, ಹೊಟ್ಟೆ ಉಬ್ಬುವಿಕೆ ಉಂಟುಮಾಡಬಹುದು.
ಪೋಷಕಾಂಶ ಹೀರಿಕೊಳ್ಳುವಿಕೆ ತಡೆಯುವುದು: ಫೈಟಿಕ್ ಆಮ್ಲ ಮತ್ತು ಲೆಕ್ಟಿನ್ ಹೆಚ್ಚಿನ ಪ್ರಮಾಣದಲ್ಲಿ ದೀರ್ಘಕಾಲ ಸೇವಿಸಿದರೆ ಖನಿಜ ಕೊರತೆ ಉಂಟಾಗಬಹುದು.
ಅಲರ್ಜಿ: ಕೆಲವರಿಗೆ ಚರ್ಮದ ದದ್ದುಗಳು, ತುರಿಕೆ, ಊತು.
ಮೂತ್ರಪಿಂಡದ ಕಲ್ಲುಗಳು: ಆಕ್ಸಲೇಟ್ಸ್ ಕಾರಣ.
ಸಲಹೆ: ದಿನಕ್ಕೆ ಅರ್ಧ ಕಪ್ ಅಥವಾ 1 ಕಪ್ ರಾಜ್ಮಾ ಸೇವಿಸಿ, 8 ಗಂಟೆಗಳ ಕಾಲ ನೆನೆಸಿ ಸಂಪೂರ್ಣ ಬೇಯಿಸಿ ಸೇವಿಸುವುದು ಉತ್ತಮ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.