ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ರೋಚಕವಾಗಿ ನಡೆದಿದೆ. ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಜಯಭೇರಿ ಹೊಕ್ಕರೂ, ಭಾರತದ ರಿಚಾ ಘೋಷ್ (Richa Ghosh) ಅವರು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಭಾರತ ಮೊದಲು ಬ್ಯಾಟಿಂಗ್ ಮಾಡಲು ಬಂದರೂ 6 ವಿಕೆಟ್ ಕಳೆದುಕೊಂಡು ಕೇವಲ 102 ರನ್‌ನಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಬಂದ ರಿಚಾ 77 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 94 ರನ್ ಮಾಡಿ ತಂಡದ ಸ್ಕೋರ್ 252ಕ್ಕೆ ತಲುಪಿಸಿದರೆ, ಶತಕಕ್ಕಿಂದ ಕೇವಲ 6 ರನ್ ದೂರವಿದ್ದರು.
ವಿಶ್ವದಾಖಲೆಗಳು
- 8ನೇ ಅಥವಾ ಕೆಳ ಕ್ರಮಾಂಕದಲ್ಲಿ ಹೆಚ್ಚಿನ ರನ್
- ರಿಚಾ ಘೋಷ್ – 94 ರನ್ (ಭಾರತ vs ದ.ಆಫ್ರಿಕಾ, 2025)
- ಕ್ಲೋಯ್ ಟ್ರಯಾನ್ – 74 ರನ್ (ದ.ಆಫ್ರಿಕಾ vs ಶ್ರೀಲಂಕಾ, 2025)
- ಫಾತಿಮಾ ಸನಾ – 69 ರನ್ (ಪಾಕಿಸ್ತಾನ vs ದ.ಆಫ್ರಿಕಾ, 2023)
- 7ನೇ ಅಥವಾ ಕೆಳ ಕ್ರಮಾಂಕದಲ್ಲಿ 80+ ರನ್
- ರಿಚಾ ಘೋಷ್ – 94 ರನ್ (2025)
- ಅಲಿ ಕುಯ್ಲರ್ಸ್ – 74* (1997)
- ಪೂಜಾ ವಸ್ತ್ರಕರ್ – 67 (2022)
ವೇಗದ ಸಾವಿರ ರನ್: ರಿಚಾ 1010 ಎಸೆತಗಳಲ್ಲಿ 1000 ರನ್ ಪೂರ್ಣಗೊಳಿಸಿ ಭಾರತದ ವೇಗದಆಟಗಾರ್ತಿ ಪಟ್ಟಿಯಲ್ಲಿ ಮೊದಲಿಗೆ ಸ್ಥಾನ ಪಡೆದರು. ವಿಶ್ವದ ತ್ರಿತೀಯ ವೇಗದ ಬ್ಯಾಟರ್ ಆಗಿ ದಾಖಲೆ ಬರೆದರು.
ಸ್ಮೃತಿ ಮಂಧಾನ ದಾಖಲೆ: ಕಳೆದ ಪಂದ್ಯಗಳಲ್ಲಿ ಕೇವಲ 54 ರನ್ ಗಳಿಸಿದರೂ, ನಿನ್ನೆ ಪಂದ್ಯದಲ್ಲಿ 23 ರನ್ ಗಳಿಸಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ನಿರ್ಮಿಸಿದರು. ಈಗ 17 ಇನ್ನಿಂಗ್ಸ್ ಗಳಲ್ಲಿ 57.76 ಸರಾಸರಿಯೊಂದಿಗೆ 982 ರನ್ ಗಳಿಸಿದ್ದಾರೆ, 4 ಶತಕಗಳೊಂದಿಗೆ.