ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ 52 ವರ್ಷಗಳಲ್ಲಿ ಯಾರಿಗೂ ಸಾಧ್ಯವಾಗದ ಸಾಧನೆ ಸ್ಮೃತಿ ಮಂಧಾನ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ವಿಶ್ವದಾಖಲೆ ನಿರ್ಮಿಸಿದೆ.
ಭಾರತ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದಾಗ ಆರಂಭಿಕ ಬ್ಯಾಟರ್ ಗಳಾದ ಪ್ರತೀಕಾ ಮತ್ತು ಮಂಧಾನ ಅರ್ಧಶತಕ ಸಿಡಿಸಿದರು. ಇಬ್ಬರೂ 155 ರನ್ ಜತೆಗೂಡಿ ದೇಶಕ್ಕೆ ಉತ್ತಮ ಆರಂಭ ನೀಡಿದರು. ಮಂಧಾನ ಆಸೀಸ್ ಬೌಲರ್ಗಳನ್ನು ಧೈರ್ಯದಿಂದ ಎದುರಿಸಿದರು.
ಸ್ಮೃತಿ ಮಂಧಾನ ಈ ವರ್ಷ ಕ್ಯಾಲೆಂಡರ್‌ನಲ್ಲಿ 1,000 ರನ್ ಮಾಡುವ ಮೊದಲ ಮಹಿಳಾ ಆಟಗಾರ್ತಿ. ಇಂದು ಅವರು ಕೇವಲ 18 ರನ್ ಬೇಕಾಗಿದ್ದಾಗ, ಮೊಲಿನೆಕ್ಸ್ ಎಸೆದ ಎಂಟನೇ ಓವರ್ ನ ಎರಡನೇ ಎಸೆತದಲ್ಲಿ ಸಿಕ್ಸರ್ ಹಿಟ್ ಮಾಡಿ 1,000 ರನ್ ಗಡಿ ತಲುಪಿದರು. ಈ ಮೂಲಕ ಹೊಸ ದಾಖಲೆ ತಮ್ಮದಾಯಿತು.
ಈ ವರ್ಷ ಮಂಧಾನ 18 ಪಂದ್ಯಗಳಲ್ಲಿ 1,031 ರನ್ ಗಳಿಸಿದ್ದಾರೆ. ಹಳೆಯ ದಾಖಲೆಗಳನ್ನು ಹಿಂದಿಟ್ಟಿದ್ದಾರೆ.
- 1997 – ಬಿಜೆ ಕ್ಲಾರ್ಕ್ (ಆಸ್ಟ್ರೇಲಿಯಾ) 970 ರನ್
- 18 ಪಂದ್ಯಗಳಲ್ಲಿ ಎಲ್ ವೋಲ್ವಾರ್ಡ್ (ದಕ್ಷಿಣ ಆಫ್ರಿಕಾ) 882 ರನ್
- 16 ಪಂದ್ಯಗಳಲ್ಲಿ ಡಿ.ಎ ಹಾಕ್ಲೆ (ನ್ಯೂಜಿಲೆಂಡ್) 880 ರನ್
- 15 ಪಂದ್ಯಗಳಲ್ಲಿ ಎಇ ಸ್ಯಾಟರ್ತ್ವೈಟ್ (ದಕ್ಷಿಣ ಆಫ್ರಿಕಾ) 853 ರನ್
ಮಂಧಾನ ಇನ್ನೂ ಒಂದು ದಾಖಲೆ ಬರೆದಿದ್ದಾರೆ. ಅವರು ಮಹಿಳಾ ಏಕದಿನದಲ್ಲಿ 5,000 ರನ್ ಅತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ (112 ಇನ್ನಿಂಗ್ಸ್) ತಲುಪಿದ ಮೊದಲ ಆಟಗಾರ್ತಿ. ಹಳೆಯ ದಾಖಲೆ: ಸ್ಟೆಫಾನಿ ಟೈಲರ್ (129 ಇನ್ನಿಂಗ್ಸ್).
ವೇಗದ 5,000 ರನ್ ಸಾಧಕರ ಪಟ್ಟಿ
- 112 ಇನ್ನಿಂಗ್ಸ್ – ಸ್ಮೃತಿ ಮಂಧಾನ (ಭಾರತ)
- 129 ಇನ್ನಿಂಗ್ಸ್ – ಸ್ಟೆಫಾನಿ ಟೈಲರ್ (ವೆಸ್ಟ್ ಇಂಡೀಸ್)
- 136 ಇನ್ನಿಂಗ್ಸ್ – ಸೂಜಿ ಬೇಟ್ಸ್ (ನ್ಯೂಜಿಲೆಂಡ್)
- 144 ಇನ್ನಿಂಗ್ಸ್ – ಮಿಥಾಲಿ ರಾಜ್ (ಭಾರತ)
- 156 ಇನ್ನಿಂಗ್ಸ್ – ಚಾರ್ಲೊಟ್ಟೆ ಎಡ್ವರ್ಡ್ (ಇಂಗ್ಲೆಂಡ್)
ಈ ಪಂದ್ಯದಲ್ಲಿ ಮಂಧಾನ 66 ಎಸೆತಗಳಲ್ಲಿ 80 ರನ್ ಗಳಿಸಿದರು (9 ಬೌಂಡರಿ, 6 ಸಿಕ್ಸರ್). 24ನೇ ಓವರ್ ನಲ್ಲಿ ಶತಕ ತಲುಪಲು ಯತ್ನಿಸಿದಾಗ ಲಿಚ್ಫೀಲ್ಡ್ ಗೆ ಕ್ಯಾಚ್ ಆಗಿ ಸ್ವಲ್ಪದರಲ್ಲೇ ಶತಕ ಮಿಸ್ ಮಾಡಿಕೊಂಡರು.