New Delhi: ಭಾರತ ಮತ್ತು EFTA ನಡುವಿನ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತಕ್ಕೆ ಹಲವಾರು ಲಾಭಗಳ ನಿರೀಕ್ಷೆ ಇದೆ. ಮುಂದಿನ 15 ವರ್ಷಗಳಲ್ಲಿ ಐರೋಪಿಯನ್ ದೇಶಗಳಿಂದ 100 ಬಿಲಿಯನ್ ಡಾಲರ್ ಹೂಡಿಕೆ ಹರಿದುಬರುವ ಸಾಧ್ಯತೆ ಇದೆ. ಇದರೊಂದಿಗೆ 10 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಬಹುದು. ಈ ಮುಕ್ತ ವ್ಯಾಪಾರ ಒಪ್ಪಂದವನ್ನು 2024ರ ಮಾರ್ಚ್ 10ರಂದು ಸಹಿ ಮಾಡಲಾದರೂ, 2025ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.
EFTA ಎಂದರೆ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್. ಐಸ್ಲ್ಯಾಂಡ್, ಲಿಕ್ಟನ್ಸ್ಟೇನ್, ನಾರ್ವೇ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳನ್ನು ಒಳಗೊಂಡ ಅಂತರಸರ್ಕಾರಿ ಸಂಘಟನೆ ಇದು. ಭಾರತ ಮೊದಲ ಬಾರಿಗೆ ಈ ನಾಲ್ಕು ದೇಶಗಳೊಂದಿಗೆ ಫ್ರೀ ಟ್ರೇಡ್ ಒಪ್ಪಂದ ಮಾಡಿಕೊಂಡಿದೆ.
2024-25ರಲ್ಲಿ ಭಾರತದಿಂದ EFTA ದೇಶಗಳಿಗೆ 72.37 ಮಿಲಿಯನ್ ಡಾಲರ್ ಮೌಲ್ಯದ ರಫ್ತು ಮಾಡಲಾಗಿದೆ. ಪ್ರಮುಖ ರಫ್ತು ಸರಕುಗಳೆಂದರೆ,
- ಗೋರಿಕಾಯಿ
- ಸಂಸ್ಕರಿಸಿದ ತರಕಾರಿಗಳು
- ಬಾಸ್ಮತಿ ಅಕ್ಕಿ
- ಬೇಳೆ ಕಾಳುಗಳು
- ಹಣ್ಣು ಮತ್ತು ದ್ರಾಕ್ಷಿ
EFTA ಒಪ್ಪಂದದಿಂದ ಭಾರತಕ್ಕೆ ಹೀಗೆಯೇ ಲಾಭ
- ಭಾರತದ ಶೇ. 92.2 ಸರಕುಗಳಿಗೆ ಟ್ಯಾರಿಫ್ ರಿಯಾಯಿತಿ
- ಇಎಫ್ಟಿಎಗೆ ಶೇ. 99.6 ರಫ್ತುಗೆ ಟ್ಯಾರಿಫ್ ರಿಯಾಯಿತಿ
- ಭಾರತದ ಇತರ ರಫ್ತುಗಳಿಗೂ ಟ್ಯಾರಿಫ್ ರಿಯಾಯಿತಿ ನೀಡಲಾಗಿದೆ,
- EFTA ಶೇ. 82.7 ಸರಕುಗಳಿಗೆ ರಿಯಾಯಿತಿ
- ಶೇ. 95.3 ರಫ್ತುಗಳಿಗೆ ಅನುಕೂಲ
ಭಾರತದಲ್ಲಿ ಡೈರಿ, ಸೋಯಾ, ಕಲ್ಲಿದ್ದಲು, ಫಾರ್ಮಾ, ಮೆಡಿಕಲ್ ಡಿವೈಸ್ ಮೊದಲಾದ ಸೂಕ್ಷ್ಮ ಕ್ಷೇತ್ರಗಳ ಸರಕುಗಳು ಈ ಒಪ್ಪಂದದಿಂದ ಹೊರಗಿಡಲಾಗಿದೆ. ಅಂದರೆ, ಈ ವಸ್ತುಗಳಿಗೆ ಭಾರತ ಇನ್ನೂ ಹೆಚ್ಚಿನ ಟ್ಯಾರಿಫ್ ವಿಧಿಸುತ್ತದೆ.