Anekal (Bangalore Rural) : ಗೋವು ಗ್ಯಾನ್ ಫೌಂಡೇಷನ್ ಪ್ರಾಣಿ ದಯಾ ಸಂಘದವರು ನೀಡಿದ ಖಚಿತ ಮಾಹಿತಿ ಮೇರೆಗೆ DySp ಮಲ್ಲೇಶ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ (Circle Inspector of Police) ಮಹಾನಂದ್ ನೇತೃತ್ವದಲ್ಲಿ ಭಾನುವಾರ ದಾಳಿ ನಡೆಸಿ ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿಯಲ್ಲಿ ಕಸಾಯಿಖಾನೆಗೆ (Slaughterhouse) ಮಾರಾಟ ಮಾಡಲು ಸಾಕಿದ್ದ ಹಸುಗಳನ್ನು (Cows) ಪೊಲೀಸರು () ರಕ್ಷಿಸಿದ್ದಾರೆ (Protected Cows).
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಲ್ ಇನ್‌ಸ್ಪೆಕ್ಟರ್ ಮಹಾನಂದ್ ” ಅಲಿ ಎಂಬುವವರು ಪ್ರಕಾಶ್ ಎಂಬುವವರಿಗೆ ಸೇರಿದ ಕೋಳಿ ಫಾರಂ ಶೆಡ್‌ನ್ನು ಬಾಡಿಗೆಗೆ ಪಡೆದು ಇಲ್ಲಿ ಗೋವುಗಳನ್ನು ಇಟ್ಟುಕೊಂಡು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗೋವುಗಳನ್ನು ಸಂರಕ್ಷಿಸಲಾಗಿದೆ” ಎಂದು ತಿಳಿಸಿದರು.
ಸಂರಕ್ಷಿಸಿದ ಗೋವುಗಳನ್ನು ಪೊಲೀಸರು ಟ್ರಕ್‌ಗಳಲ್ಲಿ ಹೊಸೂರು (Hosur) ಸಮೀಪದ ಗೋಶಾಲೆಗೆ ಕಳುಹಿಸಿದರು. ಗೋವು ಗ್ಯಾವ್ ಫೌಂಡೇಷನ್ ಸದಸ್ಯ ಸಂಜಯ್ ಉಪಸ್ಥಿತರಿದ್ದರು.