Chincholi, Kalburgi (Kalaburgi) : ಭಾನುವಾರ ತಾಲ್ಲೂಕಿನ ಪೋಚಾವರಂ ಗ್ರಾಮದಲ್ಲಿ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ (Mallana Devara Jathre) ನಡೆಯಿತು. ಬೆಳಿಗ್ಗೆ ದೇವರನ್ನು ಮೆರವಣಿಗೆ ಮಾಡಿ ಮದುವೆ ಮಾಡಲಾಯಿತು. ಮಧ್ಯಾಹ್ನ ಜಾತ್ರೆ ಅಂಗವಾಗಿ ಪೂರ್ಣಕುಂಭದ ಕೊಡಗಳ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಬುರಗಿ ಸಂಸದ ಡಾ. ಉಮೇಶ ಜಾಧವ (Dr. Umesh G Jadhav) ಪೂರ್ಣಕುಂಭದ ಕೊಡ ಹೊತ್ತುಕೊಂಡು ಮಲ್ಲಣ್ಣ ದೇವರ ದೇವಾಲಯ ಪ್ರದಕ್ಷಿಣೆ ಹಾಕಿದರು. ಅವರಿಗೆ ಗ್ರಾಮಸ್ಥರು ಕಂಬಳಿ ಹೊದಿಸಿ ಸನ್ಮಾನಿಸಿದರು.
ಉತ್ಸವದಲ್ಲಿ ಅನಂತಿ ಚಿನ್ನಗೊಲ್ಲಾ, ರಾಮಲು ದುಕಾನ, ಸಂಗಮೇಶ ಪೊಗಲಾ, ಕಿಷ್ಟಪ್ಪ ಚಿನ್ನಗೊಲ್ಲಾ, ಮಹಿಪಾಲ ಪೊಗಲಾ, ಮರಗಿ ಪ್ರಭು, ಸಂಜಿಕುಮಾರ ಚಿನ್ನಗೊಲ್ಲ ಹಾಗೂ ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಗಡಿಲಿಂಗದಳ್ಳಿ ಗ್ರಾ.ಪಂ ಅಧ್ಯಕ್ಷ ಗೌರಿಶಂಕರ ಉಪ್ಪಿನ್, ಮುಖಂಡರಾದ ವಿಜಯಕುಮಾರ ರಾಠೋಡ ಶಾದಿಪುರ, ಲಕ್ಷ್ಮಣ ಅವುಂಟಿ, ಕೆ.ಎಂ.ಬಾರಿ, ಅಶೋಕ ಚವ್ಹಾಣ, ರಾಜು ಪವಾರ, ಗೇಮು ರಾಠೋಡ್, ವಿಜಯಕುಮಾರ ಜಾಧವ, ಗೋಪಾಲ, ಅನುಸೂಜಾ ರವಿ ಕುಂಚಾವರಂ, ಪೋಚಾವರಂ, ಮೊಗದಂಪುರ, ಶಿವರಾಂಪುರ, ಶಿವರೆಡ್ಡಿಪಳ್ಳಿ, ತೋರಮಾಮಡಿ, ಶಾದಿಪುರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.