Sirwar, Raichur : ಸಿರವಾರದಲ್ಲಿ ಭಾನುವಾರ ಸಂಜೆ ಬಯಲು ಆಂಜನೇಯ ಸ್ವಾಮಿಯ ಉಚ್ಛಾಯ ಮಹೋತ್ಸವವು (Bayalu Anjaneya Swamy Temple) ಸಂಭ್ರಮದಿಂದ ನಡೆಯಿತು. ಎಳ್ಳ ಅಮಾವಾಸ್ಯೆಯ (Ellamavasye) ದಿನ ನಡೆಯುವ ಬಯಲು ಆಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಹರಕೆ, ಹೋಮ-ಹವನ, ಅಭಿಷೇಕ ಎಲೆ ಪೂಜೆ ಆಂಜನೇಯ ಮೂರ್ತಿಗೆ ವಿಶೇಷ ಹೂವಿನ ಅಲಂಕಾರವನ್ನು ಬೆಳಗ್ಗೆ ಅರ್ಚಕ ಯಲಗುರ್ದಾಚಾರ್ ಜೋಶಿ ನೇತೃತ್ವದಲ್ಲಿ ಮಾಡಲಾಯಿತು.
ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ಉಚ್ಛಾಯ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತರು ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು.