Bangalore (Bengaluru) : CBSE 10th Result , ICSE Board ಗಳ 10ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬದ ಕಾರಣ ಪೋಷಕರ ಮನವಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ First PUC ಪ್ರವೇಶದ ಅವಧಿಯನ್ನು July 30ರವರೆಗೆ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ (Department of Pre University Education) ಆದೇಶ ಹೊರಡಿಸಿದೆ.
July 30 ರ ನಂತರ August 6 ರ ಒಳಗೆ ಪ್ರವೇಶ ಪಡೆಯಲು ಇಚ್ಚಿಸುವವರು ₹ 670 ದಂಡ ಶುಲ್ಕ ಸಹಿತ ಮತ್ತು ₹ 2,890 ದಂಡ ಶುಲ್ಕ ಪಾವತಿಸಿ ಆಗಸ್ಟ್ 12ರ ಒಳಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.