back to top
19.1 C
Bengaluru
Tuesday, January 27, 2026
HomeKarnatakaBengaluru UrbanWeekend Curfew - ಸುಖಾಸುಮ್ಮನೆ ಓಡಾಡುವವರ ವಿರುದ್ಧ ಪ್ರಕರಣ ದಾಖಲು: ಕಮಲ್ ಪಂತ್

Weekend Curfew – ಸುಖಾಸುಮ್ಮನೆ ಓಡಾಡುವವರ ವಿರುದ್ಧ ಪ್ರಕರಣ ದಾಖಲು: ಕಮಲ್ ಪಂತ್

- Advertisement -
- Advertisement -

Bengaluru : ಬುಧವಾರ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ (Commissioner of Police Kamal Pant) ವೀಕೆಂಡ್ ಕರ್ಫ್ಯೂ ಮಾರ್ಗಸೂಚಿ (Weekend Curfew Guidelines) ಕುರಿತು ತಿಳಿಸಲು ಸುದ್ಧಿಗೋಷ್ಠಿ ಕರೆದಿದ್ದರು.

ಮಾಧ್ಯಮದವರೊಂದಿಗೆ ಮಾತನಾಡಿದ ಕಮಲ್ ಪಂತ್ ವೀಕೆಂಡ್ ಕರ್ಫ್ಯೂ ವೇಳೆ ಪ್ರಯಾಣಿಸುವವರಿಗೆ ಪೊಲೀಸ್ ಇಲಾಖೆ ಯಾವುದೇ ಪಾಸ್‌ಗಳನ್ನು ವಿತರಿಸುವುದಿಲ್ಲ ಬದಲಿಗೆ ಕರ್ಫ್ಯೂ ಸಮಯದಲ್ಲಿ ಬೇರೆ ಸ್ಥಳಗಳಿಗೆ ಪ್ರಯಾಣಿಸುವವರು ಗುರುತಿನ ಚೀಟಿ ಅಥವಾ ಸೂಕ್ತ ದಾಖಲೆಗಳಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಯಾವುದೇ ದಾಖಲೆಗಳಿಲ್ಲದೆ, ಸುಖಾಸುಮ್ಮನೆ ರಸ್ತೆಗಳಲ್ಲಿ ಸಂಚರಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ನಗರದಾದ್ಯಂತ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು, ಆದೇಶದಂತೆ ಪಬ್‌, ರೆಸ್ಟೋರೆಂಟ್‌ ಸ್ಥಳಗಳಿಗೆ ಶೇ 50 ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಲಾಗುವುದು. ಕರ್ಫ್ಯೂ ಅವಧಿಯಲ್ಲಿ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ ಹಾಕುವ ಕುರಿತು ಡಿಸಿಪಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು ಅವರು ಠಾಣಾಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತಾರೆ ” ಎಂದು ಹೇಳಿದರು.


Image: ANI

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page