New Delhi, India : ಭಾರತದ Covid-19 ಸಂಖ್ಯೆಯು ಗುರುವಾರ 1 ಲಕ್ಷವನ್ನು (Lakh) ಮೀರಿದೆ. ಕೇವಲ ಎಂಟು ದಿನಗಳಲ್ಲಿ Covid-19 ಸಂಖ್ಯೆಯು 10,000 ದಿಂದ 1 ಲಕ್ಷವನ್ನು ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,17,100 ಪ್ರಕರಣಗಳು (Cases) ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳು 3,71,363 ಕ್ಕೆ ತಲುಪಿದೆ. Times of India ದಾಖಲೆಗಳ ಪ್ರಕಾರ ಗುರುವಾರ, ಹೊಸ ಪ್ರಕರಣಗಳ ಸಂಖ್ಯೆ ಸುಮಾರು 1,17,000 ಕ್ಕೆ ಏರಿದೆ.
ಭಾರತದಲ್ಲಿ ಮೊದಲ ಅಲೆಯಲ್ಲಿ 10,000 ರಿಂದ 1 ಲಕ್ಷಕ್ಕೆ ಪ್ರಕರಣಗಳು ತಲುಪಲು ಸುಮಾರು 103 ದಿನಗಳನ್ನು ತೆಗೆದುಕೊಂಡಿತ್ತು, ಎರಡನೆಯ ಅಲೆಯಲ್ಲಿ 47 ದಿನಗಳು ತೆಗೆದುಕೊಂಡಿತ್ತು. ಪ್ರಸ್ತುತ ಅಲೆಯಲ್ಲಿ ಈ ಬೆಳವಣಿಗೆಯು ಎರಡನೇ ಅಲೆಗಿಂತಲೂ 5 ಪಟ್ಟು ವೇಗವಾಗಿ ತಲುಪಿರುವುದು ಕಂಡುಬರುತ್ತದೆ.