Mysuru : ಜನವರಿ 9 ರ ಭಾನುವಾರ, ಜನವರಿ 10 ರ ಸೋಮವಾರ ನಗರದ ವಿವಿಧ ಪ್ರದೇಶಗಳಿಗೆ ಪೂರೈಸುವ ಕುಡಿಯುವ ನೀರು ಸರಬರಾಜಿನಲ್ಲಿ (Drinking Water Supply) ವ್ಯತ್ಯಯವಾಗಲಿದೆ ಎಂದು ಮೈಸೂರು ನಗರ ಪಾಲಿಕೆಯ (Mysuru City Corporation) ವಾಣಿವಿಲಾಸ ನೀರು ಸರಬರಾಜು ವಿಭಾಗದ (Vani Vilas Water Supply) ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ ಯಂತ್ರಾಗಾರ, ಹೊಂಗಳ್ಳಿ ಯೋಜನೆಯ (Belagola, Hongahalli Water Supply Plants) ಬೂಸ್ಟರ್ ಸರಬರಾಜು ಮಾಡುವ ಮೇಟಗಳ್ಳಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ (Metagalli Power Distribution Centre) ತ್ರೈಮಾಸಿಕ ನಿರ್ವಹಣೆ ನಡೆಯುವುದರಿಂದ ಜ.9ರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಇರುವುದಾಗಿ ಸೆಸ್ಕ್ ಸಿಬ್ಬಂದಿ ತಿಳಿಸಿದ್ದಾರೆ. ಆದ್ದರಿಂದ ಶನಿವಾರ, ಭಾನುವಾರ ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗಲ್ಲ. ಜನರು ನೀರು ಬಂದಾಗ ಶೇಖರಿಸಿಕೊಂಡು ಪಾಲಿಕೆ ಆಡಳಿತದೊಂದಿಗೆ ಸಹಕರಿಸಬೇಕು’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. .
ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ ಎ.ಬಿ.ಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಪುಲಿಕೇಶಿ ರಸ್ತೆ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ ಭಾಗಶಃ, ನಜರ್‌ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್ ನಗರ, ಮೀನಾ ಬಜಾರ್, ವಾರ್ಡ್ ಸಂಖ್ಯೆ–8, 17, 18, 19, 23ರಿಂದ 27ರವರೆಗೆ, 40, 41, 55, 60, 61, 62 ಹಾಗೂ ಮೇಟಗಳ್ಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ.