back to top
25.9 C
Bengaluru
Wednesday, July 23, 2025
HomeEntertainmentಸ್ಮರಣೆಯ ಪ್ರತೀಕ: Ramoji Rao ಅವರ ಪ್ರತಿಮೆ ಅನಾವರಣ

ಸ್ಮರಣೆಯ ಪ್ರತೀಕ: Ramoji Rao ಅವರ ಪ್ರತಿಮೆ ಅನಾವರಣ

- Advertisement -
- Advertisement -

ಹೈದರಾಬಾದ್: ಮಾಧ್ಯಮ ಜಗತ್ತಿನಲ್ಲಿ ಹೆಸರಾಂತ ವ್ಯಕ್ತಿಯಾಗಿದ್ದ ರಾಮೋಜಿ ಗ್ರೂಪ್‌ನ ಸಂಸ್ಥಾಪಕ ದಿವಂಗತ ರಾಮೋಜಿ ರಾವ್ (Ramoji Rao) ಅವರ ಮೊದಲ ಪುಣ್ಯಸ್ಮರಣೆ ಜೂನ್ 8ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಿತು.

ಈ ಸಂದರ್ಭದ ಅಂಗವಾಗಿ, ರಾಮೋಜಿ ಗ್ರೂಪ್‌ನ ಕಚೇರಿಯ ಮುಂದೆ ರಾವ್ ಅವರ ಪ್ರತಿಮೆ ಅನಾವರಣ ಮಾಡಲಾಯಿತು. ಈ ಪ್ರತಿಮೆಯನ್ನು ಅವರ ಮೊಮ್ಮಕ್ಕಳಾದ ಬೃಹತಿ, ಸಹರಿ, ಸೋಹನ್ ಮತ್ತು ದಿವಿಜ ಅವರು ಉದ್ಘಾಟಿಸಿದರು.

ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಕಂಪನಿಯ ನೌಕರರು ಭಾಗವಹಿಸಿ ಗೌರವ ನಮನ ಸಲ್ಲಿಸಿದರು. ಶನಿವಾರದಂದು, ರಾಮೋಜಿ ಫಿಲ್ಮ್ ಸಿಟಿ ಹಾಗೂ ಇತರ ಕಚೇರಿಗಳಲ್ಲಿ ರಕ್ತದಾನ ಶಿಬಿರ ಕೂಡ ಆಯೋಜಿಸಲಾಗಿತ್ತು.

ಸಂಜೆಯ ಪುಣ್ಯಸ್ಮರಣಾ ಸಮಾರಂಭದಲ್ಲಿ, ರಾಮೋಜಿ ಗ್ರೂಪ್ ಸಿಎಂಡಿ ಸಿ.ಎಚ್. ಕಿರಣ್, ಫಿಲ್ಮ್ ಸಿಟಿ ಎಂಡಿ ವಿಜಯೇಶ್ವರಿ ಮತ್ತು ನಿರ್ದೇಶಕರುರಾದ ಬೃಹತಿ, ಸಹರಿ ಮತ್ತು ಸೋಹನ್ ಅವರು ರಾಮೋಜಿ ರಾವ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.

ರಾಮೋಜಿ ರಾವ್ ಅವರು ತಮ್ಮ ಶಿಸ್ತು, ದೃಢ ನಂಬಿಕೆ ಮತ್ತು ಪ್ರಾಮಾಣಿಕತೆ ಮೂಲಕ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆ. ಅವರ ಜೀವನದಲ್ಲಿ ಅವರು ನಿರ್ಮಿಸಿದ ಸಂಸ್ಥೆಗಳು ಮತ್ತು ಸಾಧನೆಗಳು ಶಾಶ್ವತವಾಗಿ ನೆನಪಾಗುವಂತಿವೆ.

ಅವರು ನಿರ್ಮಿಸಿದ ಸಂಸ್ಥೆಗಳು

  • ಈನಾಡು ಪತ್ರಿಕೆ,
  • ETV ನೆಟ್‌ವರ್ಕ್,
  • ರಾಮೋಜಿ ಫಿಲ್ಮ್ ಸಿಟಿ,
  • ಮಾರ್ಗದರ್ಶಿ ಚಿಟ್ ಫಂಡ್ಸ್,
  • ಪ್ರಿಯಾ ಫುಡ್ಸ್,
  • ಉಷಾಕಿರಣ್ ಮೂವೀಸ್,
  • ಡಾಲ್ಫಿನ್ ಹೋಟೆಲ್ಸ್ ಇತ್ಯಾದಿ.

ಅವರು ಕೈ ಹಾಕಿದ ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಪಡೆದಿದ್ದಾರೆ. ಅವರ ಶ್ರಮ, ದೃಷ್ಟಿಕೋಣ ಮತ್ತು ಮೌಲ್ಯಗಳು ಭವಿಷ್ಯ ತಲಮಾರಿಗೆ ಪ್ರೇರಣೆಯುಳ್ಳ ಮಾರ್ಗದರ್ಶನ ನೀಡುತ್ತವೆ.

ಅಸಾಧ್ಯವನ್ನು ಸಾಧ್ಯವಾಗಿಸಿದ ಮಹಾನ್ ವ್ಯಕ್ತಿ ರಾಮೋಜಿ ರಾವ್ ಅವರ ಹಾದಿ ಎಲ್ಲರಿಗೂ ಆದರ್ಶವಾಗಲಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page