back to top
26.5 C
Bengaluru
Monday, July 21, 2025
HomeNews5 ವರ್ಷದ ಮಕ್ಕಳಿಗೆ Aadhaar biometric ಅಪ್​ಡೇಟ್ ಕಡ್ಡಾಯ! ಈಗ ಶಾಲೆಯಲ್ಲೇ ಈ ಸೇವೆ ಲಭ್ಯ

5 ವರ್ಷದ ಮಕ್ಕಳಿಗೆ Aadhaar biometric ಅಪ್​ಡೇಟ್ ಕಡ್ಡಾಯ! ಈಗ ಶಾಲೆಯಲ್ಲೇ ಈ ಸೇವೆ ಲಭ್ಯ

- Advertisement -
- Advertisement -

ಕೆೇಂದ್ರ ಸರ್ಕಾರ 5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್​ಡೇಟ್ ಮಾಡುವ ಹೊಸ ಯೋಜನೆ ತರಲು ಸಿದ್ಧವಾಗಿದೆ. ಇದು ಬಯೋಮೆಟ್ರಿಕ್ ಅಪ್​ಡೇಟ್ ಮಾಡುವಾಗ ಮಕ್ಕಳ ಬೆರಳಚ್ಚು ಮತ್ತು ಕಣ್ಣು ಸ್ಕ್ಯಾನ್ (ಐರಿಸ್) ಸೇರ್ಪಡೆ ಮಾಡುವುದಾಗಿರುತ್ತದೆ.

5 ವರ್ಷ ದಾಟಿದ ಮಕ್ಕಳಿಗೆ ಆಧಾರ್‌ನಲ್ಲಿ ಫಿಂಗರ್ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಅಪ್​ಡೇಟ್ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಆಧಾರ್ ನಿಷ್ಕ್ರಿಯವಾಗಬಹುದು.

ಈ ಪ್ರಕ್ರಿಯೆ ಅಡಿಯಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಪ್ರತಿ ಜಿಲ್ಲೆಗೆ ಕಳುಹಿಸಲಾಗುತ್ತದೆ. ಇದು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ರೋಮಿಂಗ್ ರೀತಿಯಲ್ಲಿ ಹೋಗುತ್ತದೆ. ಇದರಿಂದ ಈ ಸೌಲಭ್ಯವು ಸಾಧ್ಯವಾದಷ್ಟು ಮಕ್ಕಳನ್ನು ತಲುಪಬಹುದು. ಪ್ರಸ್ತುತ ಈ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ 45 ರಿಂದ 60 ದಿನಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಯುಐಡಿಎಐ ತಿಳಿಸಿದೆ.

  • ಶುಲ್ಕ: 5 ರಿಂದ 7 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಅಪ್​ಡೇಟ್ ಉಚಿತ.
  • 7 ವರ್ಷದ ನಂತರ, ರೂ.100 ಶುಲ್ಕ ಪಾವತಿಸಬೇಕಾಗುತ್ತದೆ.
  • ಅಪ್​ಡೇಟ್ ಮಾಡಲು ಬೇಕಾಗುವ ದಾಖಲೆಗಳು: ಮಗು ಹೆಸರು, ಜನ್ಮ ದಿನಾಂಕ, ವಿಳಾಸದ ಪುರಾವೆ
  • 5 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಸೆರೆಹಿಡಿಯುವುದಿಲ್ಲ, ಆದರೆ ನಂತರ ಅವಶ್ಯಕವಾಗುತ್ತದೆ.
  • ಅಪ್​ಡೇಟ್ ಆಗದ ಮಕ್ಕಳ ಮೊಬೈಲ್ ಸಂಖ್ಯೆಗೆ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿದೆ. ಮಕ್ಕಳಿಗೆ ಸರಕಾರದ ಎಲ್ಲಾ ಸೌಲಭ್ಯಗಳು ಲಭ್ಯವಾಗಬೇಕಾದರೆ ಆಧಾರ್ ಅಪ್​ಡೇಟ್ ಬಹಳ ಅಗತ್ಯ.

UIDAI ಮುಂದಿನ ಹಂತದಲ್ಲಿ 15 ವರ್ಷ ದಾಟಿದ ಮಕ್ಕಳಿಗೆ ಎರಡನೇ ಬಯೋಮೆಟ್ರಿಕ್ ಅಪ್​ಡೇಟ್ ಅನ್ನೂ ಶಾಲೆ ಅಥವಾ ಕಾಲೇಜುಗಳ ಮೂಲಕ ಜಾರಿಗೆ ತರಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page