back to top
23.6 C
Bengaluru
Monday, July 21, 2025
HomeKarnatakaChikkaballapuraವಕೀಲರ ದಿನಾಚರಣೆ ಕಾರ್ಯಕ್ರಮ

ವಕೀಲರ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -

Bagepalli : ಬಾಗೇಪಲ್ಲಿ ನಗರದ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ (Advocates Day) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಿವಿಲ್ ಹಿರಿಯ ನ್ಯಾಯಾಧೀಶೆ ಲಾವಣ್ಯ ಮಾತನಾಡಿ “ವಕೀಲರು ನಿರಂತರ ಅಧ್ಯಯನ ಮಾಡುವುದರ ಮೂಲಕ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸುತ್ತಾ ಸಂವಿಧಾನದ ಆಶಯ ಹಾಗೂ ಹಕ್ಕುಗಳಿಗೆ ಧಕ್ಕೆ ತರದಂತೆ ಇರಬೇಕು. ಕಕ್ಷಿದಾರರು ನ್ಯಾಯಾಲಯದ ವ್ಯವಸ್ಥೆಯನ್ನು ನಂಬಿಕೆ ಬರುವಂತಹ ಕೆಲಸ ನಿರ್ವಹಿಸಬೇಕಾಗಿದೆ. ಹಿರಿಯರ ಮಾರ್ಗದರ್ಶನ ಪಡೆದು ಕಿರಿಯರು ಸದಾ ಅಧ್ಯಯನ ಶೀಲರಾಗಬೇಕು” ಎಂದು ಹೇಳಿದರು.

ನ್ಯಾಯಾಧೀಶ ಜೆ.ರಂಗಸ್ವಾಮಿ, ಸಹಾಯಕ ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಉಪಾಧ್ಯಕ್ಷ ರಾಮಾಂಜಿ, ಫಯಾಜ್ ಅಹಮದ್, ಅಪ್ಪಸ್ವಾಮಿ, ಅಲ್ಲಾಬಕಾಶ್, ಎ.ಜಿ.ಸುಧಾಕರ್, ಬಿ.ಆರ್.ನರಸಿಂಹನಾಯ್ಡು, ಬಾನಾದತ್ತಾತ್ರೇಯ, ಸುಜಾತದತ್ತಾತ್ರೇಯ, ನರಸಿಂಹರೆಡ್ಡಿ, ಸತ್ಯನಾರಾಯಣ ರಾವ್, ಚಂದ್ರಶೇಖರ್, ಮಂಜುನಾಥ್, ನಾಗಭೂಷಣನಾಯಕ್, ಬಾಲುನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

The post ವಕೀಲರ ದಿನಾಚರಣೆ ಕಾರ್ಯಕ್ರಮ appeared first on Chikkaballapur.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page