Search
WhatsApp alerts

Home › News

ಬೆಂಗಳೂರಿನ ಆರು Metro Stations ಗಳಲ್ಲಿ AI ಆಧಾರಿತ ನಿಗಾ ವ್ಯವಸ್ಥೆ

administrator · Published

AI-based surveillance system at six metro stations in Bengaluru

Bengaluru: ಪ್ರಯಾಣಿಕರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಆರು ಮೆಟ್ರೋ ನಿಲ್ದಾಣಗಳಲ್ಲಿ ಕೃತಕಬುದ್ಧಿಮತ್ತೆ (AI) ಆಧಾರಿತ ಸುಧಾರಿತ CCTV camera ವ್ಯವಸ್ಥೆಯನ್ನು ಅಳವಡಿಸಿದೆ.

ಇದೇ ಸಂದರ್ಭದಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಹತ್ತು ಹೊಸ ಕ್ಯೂ.ಆರ್ ಟಿಕೆಟ್ ಯಂತ್ರಗಳನ್ನೂ ಸ್ಥಾಪಿಸಲಾಗಿದೆ. ಈ ಸಿಸಿಟಿವಿ ಕ್ಯಾಮೆರಾಗಳು ನಿಲ್ದಾಣದ ಒಳಾಂಗಣ ಮಾತ್ರವಲ್ಲ, ಸುತ್ತಲಿನ ಸ್ಥಳಗಳನ್ನೂ ಗಮನಿಸುತ್ತವೆ.

ಈ ನಿಗಾ ವ್ಯವಸ್ಥೆಯನ್ನು ಮೇ 6, 2025 ರಿಂದ ಪ್ರಾರಂಭಿಸಿದ್ದು, ಇದರಲ್ಲಿ “ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್” (ANPR) ತಂತ್ರಜ್ಞಾನವಿದೆ. ಇದರ ಮೂಲಕ ನಿಲ್ದಾಣದ ಬಳಿ ನಿಲ್ಲಿಸಿದ ವಾಹನಗಳ ಸಂಖ್ಯಾ ಫಲಕಗಳನ್ನು ಗುರುತಿಸಲಾಗುತ್ತದೆ. ಎಐ ಆಧಾರಿತ ವಿಡಿಯೋ ವಿಶ್ಲೇಷಣೆಯಿಂದ ಅನುಮಾನಾಸ್ಪದ ಚಟುವಟಿಕೆಗಳನ್ನು ಕೂಡಲೇ ಪತ್ತೆಹಚ್ಚಬಹುದು.

BMRCL ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರು, “ಪ್ರಯಾಣಿಕರ ಭದ್ರತೆ ನಮಗೆ ಪ್ರಮುಖವಾಗಿದ್ದು, ತಂತ್ರಜ್ಞಾನ ಬಳಸಿ ನಾವು ಹೆಚ್ಚಿನ ಸುರಕ್ಷತೆ ನೀಡಲು ತಯಾರಾಗಿದ್ದೇವೆ. ಈ ಎಐ ಮತ್ತು ANPR ತಂತ್ರಜ್ಞಾನಗಳಿಂದ ನಿಲ್ದಾಣದ ಪರಿಸರದ ಮೇಲೆ ಸದಾ ನಿಗಾ ಇರಿಸಲು ಸಾಧ್ಯವಾಗುತ್ತದೆ,” ಎಂದು ತಿಳಿಸಿದ್ದಾರೆ.

BMRCL ಹೇಳುವುದೇನೆಂದರೆ, ಮೆಟ್ರೋ ಸೇವೆ ಹೆಚ್ಚಿನ ಜನರಿಗೆ ಉಪಯುಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಭದ್ರತೆಯನ್ನು ಬಲಪಡಿಸಲು ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಇಂತಹ ಸ್ಮಾರ್ಟ್ ನಿಗಾ ವ್ಯವಸ್ಥೆಗಳನ್ನು ಮುಂದೆಯೂ ಅಳವಡಿಸಲಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page