ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ (Alex Carey) ತನ್ನ ಅತ್ಯುತ್ತಮ ಪ್ರದರ್ಶನದಿಂದ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗಾಲೆ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ, ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ 257 ರನ್ ಕಲೆಹಾಕಿತ್ತು. ಕುಸಾಲ್ ಮೆಂಡಿಸ್ (85) ಮತ್ತು ದಿನೇಶ್ ಚಂಡಿಮಲ್ (74) ಅವರ ಅರ್ಧಶತಕಗಳಿಂದ ಇದು ಸಾಧ್ಯವಾಯಿತು.
ಆಸ್ಟ್ರೇಲಿಯಾ ಪರ, ನಾಯಕ ಸ್ಟೀವ್ ಸ್ಮಿತ್ 131 ರನ್ ಬಾರಿಸಿದರೆ, ಅಲೆಕ್ಸ್ ಕ್ಯಾರಿ 156 ರನ್ ಕಲೆಹಾಕಿದರು. ಈ ಇನಿಂಗ್ಸ್ ನಲ್ಲಿ 188 ಎಸೆತಗಳನ್ನು ಎದುರಿಸಿದ ಅಲೆಕ್ಸ್, 2 ಸಿಕ್ಸ್ ಮತ್ತು 15 ಫೋರ್ ಗಳೊಂದಿಗೆ 156 ರನ್ ಸಾಧಿಸಿದರು.
ಅಲೆಕ್ಸ್ ಕ್ಯಾರಿ 156 ರನ್ ಗಳಿಸಿ, ಏಷ್ಯಾದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 150+ ರನ್ ಮಾಡುವ ಆಸ್ಟ್ರೇಲಿಯಾದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ. ಇದಕ್ಕೂ ಮುನ್ನ, ಆ್ಯಡಂ ಗಿಲ್ಕ್ರಿಸ್ಟ್ 2004 ರಲ್ಲಿ ಕ್ಯಾಂಡಿಯಲ್ಲಿ 144 ರನ್ ಕಲೆಹಾಕಿ ಈ ದಾಖಲೆ ಮುಂಚಿತವಾಗಿ ಸ್ಥಾಪಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 414 ರನ್ ಕಲೆಹಾಕಿ, 157 ರನ್ ಗಳ ಮುನ್ನಡೆ ಪಡೆದಿದೆ.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ದಿನೇಶ್ ಚಾಂಡಿಮಲ್, ಏಂಜೆಲೊ ಮ್ಯಾಥ್ಯೂಸ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ನಿಶಾನ್ ಪೀರಿಸ್, ಲಹಿರು ಕುಮಾರ.
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್ (ನಾಯಕ), ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ಯೂ ವೆಬ್ಸ್ಟರ್, ಕೂಪರ್ ಕಾನೊಲಿ, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್.