New Delhi, India ನವದೆಹಲಿಯ ಇಂಡಿಯಾ ಗೇಟ್ (India Gate) ಬಳಿ 50 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿಯನ್ನು (Amar Jawan Jyoti) ನಂದಿಸುತ್ತಿಲ್ಲ, ಬದಲಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ (National War Memorial) ನ ಜ್ಯೋತಿಯಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇಂಡಿಯಾ ಗೇಟ್ ನಲ್ಲಿರುವ ದೇಶದ ಹುತಾತ್ಮ ಸೈನಿಕರಿಗೆ (Martyred Soldiers) ಗೌರವ ಸೂಚಕವಾದ ಅಮರ್ ಜವಾನ್ ಜ್ಯೋತಿಯ ಜ್ವಾಲೆಯನ್ನು ಶಾಶ್ವತವಾಗಿ ನಂದಿಸಲಾಗುತ್ತದೆ ಎಂಬ ವರದಿಗಳ ಬಗ್ಗೆ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ.
“ಅಮರ್ ಜವಾನ್ ಜ್ಯೋತಿಯಲ್ಲಿನ ಜ್ವಾಲೆಯು 1971 ಮತ್ತು ಇತರ ಯುದ್ಧಗಳ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಅಸಮಂಜಸ ಸಂಗತಿಯಾಗಿದೆ ಏಕೆಂದರೆ ಅವರ ಹೆಸರುಗಳು ಅಲ್ಲಿ ಕಂಡುಬರುವುದಿಲ್ಲ” ಎಂದು ಸರ್ಕಾರ ತಿಳಿಸಿದೆ.
“ಇಂಡಿಯಾ ಗೇಟ್‌ನಲ್ಲಿ ಕೆತ್ತಲಾದ ಹೆಸರುಗಳು ಮೊದಲನೆಯ ಮಹಾಯುದ್ಧ ಮತ್ತು ಆಂಗ್ಲೋ ಆಫ್ಘನ್ ಯುದ್ಧದಲ್ಲಿ ಬ್ರಿಟಿಷರಿಗಾಗಿ ಹೋರಾಡಿದ ಕೆಲವು ಹುತಾತ್ಮರ ಹೆಸರುಗಳಾಗಿವೆ ಮತ್ತು ಇದು ನಮ್ಮ ವಸಾಹತುಶಾಹಿ ಗತಕಾಲದ ಸಂಕೇತವಾಗಿದೆ.
1971 ರ ಯುದ್ಧ, ಅದರ ಮೊದಲು ಮತ್ತು ನಂತರದ ಎಲ್ಲಾ ಯುದ್ಧಗಳು ಸೇರಿದಂತೆ ಎಲ್ಲಾ ಭಾರತೀಯ ಹುತಾತ್ಮ ಸೈನಿಕರ ಹೆಸರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇರಿಸಲಾಗಿದೆ. ಹಾಗಾಗಿ ಇಲ್ಲಿ ಜ್ವಾಲೆಯು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುವುದು ನಿಜವಾದ ಶ್ರದ್ಧಾಂಜಲಿಯಾಗಿದೆ” ಎಂದು ತಿಳಿಸಿದೆ.