Jammu & Kashmir : ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರಾ (Amarnath Yatra) ಸೋಮವಾರ ಬೆಳಗ್ಗೆ 4,000 ಯಾತ್ರಾರ್ಥಿಗಳು ಕಾಶ್ಮೀರದ ಭಗವತಿ ನಗರ ಬೇಸ್ ಕ್ಯಾಂಪ್ (Bhagwati Nagar Base Camp) ನಿಂದ ಹೊರಡುವ ಮೂಲಕ ಮತ್ತೇ ಪ್ರಾರಂಭಗೊಂಡಿದೆ (Resumes) ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಹವಾಮಾನ ಸರಿಯಿಲದ್ದ ಕಾರಣ Jammu ಬೇಸ್ ಕ್ಯಾಂಪ್ ನಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
July 8 ರಂದು ಮೇಘಸ್ಪೋಟದಿಂದ (Cloud Blast) ಪ್ರವಾಹ ಉಂಟಾಗಿ 16 ಯಾತ್ರಾರ್ಥಿಗಳು ಮೃತರಾಗಿದ್ದು 30 ಕ್ಕಿಂತ ಹೆಚ್ಚು ಯಾತ್ರಾರ್ಥಿಗಳು ಕಾಣೆಯಾಗಿದ್ದರು. ಅಮರನಾಥ ಯಾತ್ರೆಗೆ ರಾಜ್ಯದಿಂದ ತೆರಳಿದ್ದ 370 ಯಾತ್ರಾರ್ಥಿಗಳ ಮಾಹಿತಿಯು ರಾಜ್ಯ ವಿಕೋಪ ನಿರ್ವಹಣಾ ಕೇಂದ್ರಕ್ಕೆ (SEOC) ಲಭಿಸಿದ್ದು, ಈ ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲ ಯಾತ್ರಿಕರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
Image: DD Kashmir