
Kolar : ಸ್ವಾತಂತ್ರ್ಯ ಮಹೋತ್ಸವದ 75ನೇ ವರ್ಷ ಅಂಗವಾಗಿ ಜಿಲ್ಲೆಯಲ್ಲಿ ಅಮೃತ ಸರೋವರ (Amrutha Sarovar) ಅಭಿಯಾನದ ಅಡಿಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivasapur), ಮಾಲೂರು (Malur), ಮುಳಬಾಗಿಲು (Mulabagal) ಮತ್ತು ಕೋಲಾರ ತಾಲ್ಲೂಕಿನಲ್ಲಿ 75 ಕೆರೆಗಳನ್ನು ಅಭಿವೃದ್ಧಿಪಡಿಸಲು ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಯನ್ನು ಕೇಂದ್ರ ತಂಡ ಪರಿಶೀಲನೆ (Inspection) ನಡೆಸಿದೆ.
ತಾಲ್ಲೂಕಿಗೆ ಒಬ್ಬರಂತೆ ನಿಯೋಗದಿಂದ ಭೇಟಿ ನೀಡಿ ಒಂದು ತಾಲ್ಲೂಕಿನಲ್ಲಿ 6 ಕೆರೆಗಳ ಕಾಮಗಾರಿಗಳನ್ನು ವೀಕ್ಷಿಸಿ ಕೇಂದ್ರಕ್ಕೆ ಸಲ್ಲಿಸಲು ಪ್ರಗತಿ ಪರಿಶೀಲನಾ ವರದಿಯನ್ನು ಸಿದ್ದಪಡಿಸಿಕೊಂಡಿದೆ.
ಈ ವೇಳೆ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ನರೇಗಾ ತಾಂತ್ರಿಕ ಸಿಬ್ಬಂದಿ ಉಪಸ್ಥರಿದ್ದರು.