
Malur, Kolar : ಮೇ 20ರಂದು ನಡೆದಿದ್ದ ಮಾಲೂರು ತಾಲ್ಲೂಕಿನ ತಿಪ್ಪಸಂದ್ರ ಗ್ರಾಮ ಪಂಚಾಯಿತಿ (Tippasandra Grama Panchayat) ಉಪ ಚುನಾವಣೆಯ ಫಲಿತಾಂಶ ಭಾನುವಾರ ಹೊರಬಂದಿದ್ದು 50 ಮತಗಳ ಅಂತರದಲ್ಲಿ Congress ಬೆಂಬಲಿತ ಮುನಿಯಮ್ಮ ಅಶ್ವತಪ್ಪ ಅವರು ಜಯಗಳಿಸಿದ್ದಾರೆ.
ಚುನಾವಣೆಯಲ್ಲಿ ಮುನಿಯಮ್ಮ ಅಶ್ವತಪ್ಪ ಅವರು 153, ಧನಲಕ್ಷ್ಮಿ ಮುರುಗೇಶ್ 103, ಪಾಪಮ್ಮ 87, ಗೀತಾ ನಾರಾಯಣಸ್ವಾಮಿ 2 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧಿಕಾರಿ ಶ್ರೀಕಾಂತ್ ನಾಯಕ್ ಹೇಳಿದರು.
ಗ್ರಾಮದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಶಿರಸ್ತೇದಾರ ಭಾಸ್ಕರ್, ಚುನಾವಣಾ ಶಾಖೆಯ ಬಾಲು, ನಂದೀಶ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗೇಶ್, ಉಮೇಶ್, ಪ್ರಭಾಕರ್, ತ್ಯಾಗರಾಜ, ಸುದೀಪ್, ದಿಲೀಪ್, ಸಂದೀಪ್, ರವಿ, ಶಿವರಾಜ್, ಸುಧಾಕರ್, ಸುರೇಶ್, ಪ್ರಸನ್ನ, ರಾಮಪ್ರಸಾದ್, ಶ್ರೀರಾಮ್, ಸಾಗರ್ ಉಪಸ್ಥಿತರಿದ್ದರು.