Andhra Pradesh : ಪ್ರಸಿದ್ಧ ತಿರುಮಲ Tirupati Laddu ಗಳಿಗೆ ಪ್ರಾಣಿಗಳ ಕೊಬ್ಬನ್ನು ತುಪ್ಪದಲ್ಲಿ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ (Andhra Pradesh Government) 9 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ತಿರುಮಲದಲ್ಲಿ ಹಿಂದಿನ YSR Congress ಪಕ್ಷದ ಆಡಳಿತದಲ್ಲಿ ನಡೆದಿದೆ ಎನ್ನಲಾದ ಕಲಬೆರಕೆ ಮತ್ತು ಇತರ ಅಕ್ರಮಗಳ ಬಗ್ಗೆ ಪೊಲೀಸ್ ಮಹಾನಿರೀಕ್ಷಕ (ಗುಂಟೂರು ರೇಂಜ್) ಸರ್ವಶ್ರೇಷ್ಠ ತ್ರಿಪಾಠಿ ನೇತೃತ್ವದ ಎಸ್‌ಐಟಿ ಪರಿಶೀಲನೆ ನಡೆಸಲಿದೆ.
SIT ಯ ಪ್ರಮುಖ ಸದಸ್ಯರು
- ಸರ್ವಶ್ರೇಷ್ಠ ತ್ರಿಪಾಠಿ
- ಗೋಪಿನಾಥ್ ಜತ್ತಿ, ಉಪ ಪೊಲೀಸ್ ಮಹಾನಿರೀಕ್ಷಕರು (ವಿಶಾಖಪಟ್ಟಣ ರೇಂಜ್)
- ವಿ ಹರ್ಷವರ್ಧನ್ ರಾಜು, ಪೊಲೀಸ್ ವರಿಷ್ಠಾಧಿಕಾರಿ (ವೈಎಸ್‌ಆರ್ ಕಡಪ ಜಿಲ್ಲೆ)
- ವೆಂಕಟ್ ರಾವ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ತಿರುಪತಿ ಜಿಲ್ಲೆ)
- ವಿವಿಧ ಜಿಲ್ಲೆಗಳ ಇತರ ಪೊಲೀಸ್ ಅಧಿಕಾರಿಗಳು ಕೂಡ ತನಿಖೆಯ ಭಾಗವಾಗಿದ್ದಾರೆ.
ಸಂಪೂರ್ಣ ಸಹಕಾರ
ಆಂಧ್ರ ಸರ್ಕಾರವು ಎಸ್‌ಐಟಿಯೊಂದಿಗೆ ಸಹಕರಿಸಲು ಮತ್ತು ಅಗತ್ಯವಿರುವ ಯಾವುದೇ ಮಾಹಿತಿ ಅಥವಾ ತಾಂತ್ರಿಕ ನೆರವು ನೀಡುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ. ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಬಾಹ್ಯ ತಜ್ಞರನ್ನು ಕೂಡ ಕರೆಯಬಹುದು.
ವಿವಾದದ ಹಿನ್ನೆಲೆ
ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ನಂತರ ವಿವಾದ ಭುಗಿಲೆದ್ದಿದೆ.
ನಾಯ್ಡು ಅವರು ಗುಜರಾತ್‌ನ ಖಾಸಗಿ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ, ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಬೀಫ್ ಟ್ಯಾಲೋ, ಹಂದಿ ಕೊಬ್ಬು (Pig Fat) ಮತ್ತು ಮೀನಿನ ಎಣ್ಣೆ ಇದೆ ಎಂದು ಆರೋಪಿಸಿದರು.
ಆದರೆ, ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಆರೋಪವನ್ನು ಬಲವಾಗಿ ಅಲ್ಲಗಳೆದಿದ್ದಾರೆ, ತಮ್ಮ ಅಧಿಕಾರಾವಧಿಯಲ್ಲಿ ಅಂತಹ ಯಾವುದೇ ಉಲ್ಲಂಘನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ. ನಾಯ್ಡು ಅವರು “ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ” ಎಂದು ಆರೋಪಿಸಿ, ಅವರನ್ನು “ಸುಳ್ಳುಗಾರ” ಎಂದು ಕರೆದಿದ್ದಾರೆ.