back to top
20.5 C
Bengaluru
Tuesday, July 15, 2025
HomeTechnologyತ್ವರಿತವಾಗಿ Train ticket ಕಾಯ್ದಿರಿಸಲು ಈ apps ಗಳು ಅತ್ಯುತ್ತಮ!

ತ್ವರಿತವಾಗಿ Train ticket ಕಾಯ್ದಿರಿಸಲು ಈ apps ಗಳು ಅತ್ಯುತ್ತಮ!

- Advertisement -
- Advertisement -

ಪ್ರಯಾಣಿಕರೇ, ಇಲ್ಲಿ ಗಮನಿಸಿ. ರೈಲಿನಲ್ಲಿ ಪ್ರಯಾಣ ಮಾಡಲು ತ್ವರಿತವಾಗಿ ಟಿಕೆಟ್ ಬುಕ್ (Train ticket) ಮಾಡಲು ಉತ್ತಮ ಅಪ್ಲಿಕೇಶನ್ ಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ಚಿಂತೆ ಬೇಡ. ರೈಲು ಟಿಕೆಟ್ ಬುಕ್ ಮಾಡುವುದು ಈಗ ತುಂಬಾ ಸುಲಭವಾಗಿದೆ. ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಬುಕ್ ಮಾಡಲು ಅನೇಕ ಅಪ್ಲಿಕೇಶನ್ ಗಳು ಲಭ್ಯವಿದ್ದು, ಕೆಲವು ಮಾತ್ರ ಹೆಚ್ಚು ಪ್ರಚಲಿತವಾಗಿದೆ.

IRCTC ರೈಲ್ ಕನೆಕ್ಟ್ ಆಪ್: IRCTC ಆಪ್‌ವು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಬುಕಿಂಗ್ ಆಪ್ ಆಗಿದ್ದು, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ. ಇದರ ಸರಳ ವಿನ್ಯಾಸ ಮತ್ತು ಬಳಕೆ ಸುಲಭವಾದ ಇಂಟರ್ಫೇಸ್‌ವು ಗ್ರಾಹಕರಿಗೆ ಸಹಜ ಅನುಭವವನ್ನು ನೀಡುತ್ತದೆ. ಇಲ್ಲಿ ಸೀಟ್ ಲಭ್ಯತೆ, ತತ್ಕಾಲ್ ಟಿಕೆಟ್, PNR ಸ್ಟೇಟಸ್‌ಗಳು ಸುಲಭವಾಗಿ ಲಭ್ಯವಿವೆ.

ಕನ್ಫರ್ಮ್ ಟಿಕೆಟ್ ಆಪ್: ConfirmTkt‌ವು IRCTC ಜೊತೆಗೆ ಪಾಲುದಾರಿಕೆಯಾದ ಅಪ್ಲಿಕೇಶನ್ ಆಗಿದ್ದು, ಇದರಲ್ಲಿ ಟಿಕೆಟ್ ಬುಕಿಂಗ್, ಲೈವ್ ಟ್ರೈನ್ ಸ್ಟೇಟಸ್, ಮತ್ತು ರೈಲು ವೇಳಾಪಟ್ಟಿಯ ಮಾಹಿತಿಯನ್ನು ನೋಡಬಹುದು. ಇದು ತತ್ಕಾಲ್ ಟಿಕೆಟ್‌ಗಳಿಗಾಗಿ ಇತ್ಯಾದಿ ಸೇವೆಗಳನ್ನು ನೀಡುತ್ತದೆ.

ಮೇಕ್ ಮೈ ಟ್ರಿಪ್: MakeMyTrip‌ ಅಪ್ಲಿಕೇಶನಿನಲ್ಲಿ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮುಂತಾದ ಎಲ್ಲಾ ಸೇವೆಗಳ ಬುಕಿಂಗ್ ಮಾಡಲು ಸಾಧ್ಯವಾಗುತ್ತದೆ. ಇಲ್ಲಿ ರೈಲು ಟಿಕೆಟ್‌ಗಳ ಪತ್ತೆ, ಟ್ರೈನ್ ವೇಳಾಪಟ್ಟಿ ಮತ್ತು ಲೈವ್ ರನ್ನಿಂಗ್ ಸ್ಟೇಟಸ್‌ಗಳನ್ನು ನೋಡಬಹುದು.

ರೈಲು ಯಾತ್ರಾ (RailYatra) ಆಪ್: RailYatra‌ ಅಪ್ಲಿಕೇಶನ್‌ವು ರೈಲು ಟಿಕೆಟ್ ಕಾಯ್ದಿರಿಸಲು ಮತ್ತೊಂದು ಉತ್ತಮ ಆಯ್ಕೆಯಾಗಿದ್ದು, ಇದು ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್‌ಗಳಿಗೆ ಲಭ್ಯವಿದೆ. ಇಲ್ಲಿ ಸೀಟ್ ಲಭ್ಯತೆ, ಟಿಕೆಟ್ ಶುಲ್ಕ, ಟ್ರೈನ್ ಲೈವ್ ಸ್ಟೇಟಸ್, ಮತ್ತು ಟೈಮಿಂಗ್‌ಗಳನ್ನು ಪರಿಶೀಲಿಸಬಹುದು.

ಹೀಗೆ, ಮೇಲ್ಕಂಡ ಅಪ್ಲಿಕೇಶನ್ ಗಳನ್ನು ಬಳಸಿ, ನೀವು ರೈಲು ಟಿಕೆಟ್‌ಗಳನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಬುಕ್ ಮಾಡಬಹುದು. ಅಂದಹಾಗೆ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ಆಯ್ಕೆ ಇದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page