Changwon, South Korea : ಭಾರತದ ಶೂಟರ್ ಅರ್ಜುನ್ ಬಾಬುತಾ (Arjun Babuta) ಅವರು ದಕ್ಷಿಣ ಕೊರಿಯಾದ ಚಾಂಗ್ವಾನ್ ನಲ್ಲಿ ನಡೆಯುತ್ತಿರುವ ISSF ವಿಶ್ವಕಪ್‌ನಲ್ಲಿ (Shooting World Cup) ಪುರುಷರ 10 ಮೀಟರ್ Air Rifle ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಸಾಧಿಸಿದ್ದಾರೆ.
ಬಾಬುತಾ ಅವರು Tokyo Olympics ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಲುಕಾಸ್ ಕೊಜೆನಿಸ್ಕಿ ಅವರನ್ನು 17-9 ರಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಅರ್ಜುನ್‌ಗೆ ಚೊಚ್ಚಲ ಚಿನ್ನವಾಗಿದೆ. ಇವರು ಅಜೆರ್ಬೈಜಾನ್‌ನ ಗಬಾಲಾದಲ್ಲಿ ನಡೆದ 2016 ರ ಜೂನಿಯರ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.
2016 ರಿಂದ ಭಾರತವನ್ನು ಶೂಟಿಂಗ್ ನಲ್ಲಿ ಪ್ರತಿನಿಧಿಸುತ್ತಿರುವ ಪಂಜಾಬ್‌ನ 23 ವರ್ಷದ ಆಟಗಾರರಾದ ಅರ್ಜುನ್ ಬಾಬುತಾ, ಈ ಹಿಂದೆ 261.1 ಅಂಕಗಳೊಂದಿಗೆ ರ‍್ಯಾಂಕಿಂಗ್ ಸುತ್ತಿನಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಅರ್ಹತೆ ಪಡೆದಿದ್ದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ ಮತ್ತೊಬ್ಬ ಭಾರತೀಯ ಪಾರ್ಥ್ ಮಖಿಜಾ 258.1 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇಸ್ರೇಲ್‌ನ 33 ವರ್ಷದ ಸೆರ್ಗೆಯ್ ರಿಕ್ಟರ್ 259.9 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.