ಭಾರತೀಯ ಅಂಚೆ ಕಚೇರಿ (India Post) ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra) ಅವರನ್ನು ಅವರ ಗ್ರಾಮದಲ್ಲಿ ‘ಗೋಲ್ಡನ್’ ಲೆಟರ್ ಬಾಕ್ಸ್ ಅನುಶನಗೊಳಿಸುವ ಮೂಲಕ ಗೌರವ ಸೂಚಿಸಿದೆ.
ಟೋಕಿಯೊ 2020 ಒಲಿಂಪಿಕ್ಸ್ (Tokyo 2020 Summer Olympics) ನ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ (Javelin Throw) ಚಿನ್ನದ ಪದಕ (Gold Medal) ಪಡೆದ ನೀರಜ್ ಚೋಪ್ರಾ ಅವರ ಗೌರವಾರ್ಥವಾಗಿ ಭಾರತೀಯ ಅಂಚೆ ಕಛೇರಿಯು ಹರಿಯಾಣದ ಪಾಣಿಪತ್‌ನ ಅವರ ತವರು ಪಟ್ಟಣವಾದ ಖಂಡ್ರಾದಲ್ಲಿ (Khandra village, Panipat district, Haryana) ಚಿನ್ನದ ಬಣ್ಣದ ಅಂಚೆ ಡಬ್ಬಿಯನ್ನು ಅನುಷ್ಠಾನಗೊಳಿಸಿದೆ (Golden Letter Box). ಅಂಚೆ ಡಬ್ಬಿಯು ಚಿನ್ನದ ಬಣ್ಣದ ಲೇಪನ ಹೊಂದಿದ್ದು, “ಟೋಕಿಯೊ ಒಲಿಂಪಿಕ್ಸ್ 2020 ರ ಜಾವೆಲಿನ್ ಥ್ರೋ ಚಿನ್ನದ ಪದಕ ವಿಜೇತ ಶ್ರೀ ನೀರಜ್ ಚೋಪ್ರಾ ಗೌರವಾರ್ಥವಾಗಿ” ಎಂಬ ಸಂದೇಶವನ್ನು ಅದರ ಮೇಲೆ ಬರೆಯಲಾಗಿದೆ.
ಟೋಕಿಯೊ 2020 ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ, ಟ್ರ್ಯಾಕ್ ಮತ್ತು ಫೀಲ್ಡ್ (Track and Field) ಈವೆಂಟ್‌ಗಳಲ್ಲಿ ಭಾರತದ ಮೊದಲ ಒಲಿಂಪಿಕ್ ಚಿನ್ನದ ಪದಕ ವಿಜೇತರೆನಿಸಿಕೊಂಡಿದ್ದರು.
ಆಗಸ್ಟ್ 7, 2021 ರಂದು 87.58 ಮೀ ದೂರ ಜಾವೆಲಿನ್ ಅನ್ನು ಎಸೆದು ಚಿನ್ನದ ಪದಕ ಪಡೆದಿದ್ದ ಚೋಪ್ರಾ, ಭಾರತೀಯರ ಹೆಮ್ಮೆಗೆ ಪಾತ್ರರಾದವರು.