ಬಾಂಗ್ಲಾದೇಶದ (Bangladesh)ಮಾಜಿ ಪ್ರಧಾನಿ (Former PM) ಶೇಖ್ ಹಸೀನಾ (Sheikh Hasina) ವಿರುದ್ಧ ಅಲ್ಲಿನ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದೆ.
ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದರು.
ಬಾಂಗ್ಲಾದೇಶ (Bangladesh) ನ್ಯಾಯಾಲಯವು ಶೇಖ್ ಹಸೀನಾ ವಿರುದ್ಧ ಇಂದು ಅಕ್ಟೋಬರ್ 17 ಗುರುವಾರ ಬಂಧನ ವಾರಂಟ್ (Arrest warrant) ಹೊರಡಿಸಿದೆ.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್‌ನ (International Criminal Tribunal) ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಈ ಬಂಧನ ವಾರಂಟ್ ಕುರಿತು ಮಾಹಿತಿ ನೀಡಿದರು.
ಬಾಂಗ್ಲಾದೇಶ ಹಿಂಸಾಚಾರಕ್ಕೆ ಹೆದರಿ ದೇಶಬಿಟ್ಟು ಓಡಿ ಬಂದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಮತ್ತೆ ಮರಳಿ ದೇಶಕ್ಕೆ ಕರೆಸಿಕೊಳ್ಳಬೇಕು ಎಂದು ಇದೀಗ ಅಲ್ಲಿನ ರಾಜಕಾರಣಿಗಳು ಪಣತೊಟ್ಟಿದ್ದಾರೆ.
ಹೀಗಿದ್ದಾಗ, ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿಯಲ್ಲಿ ಬಾಂಗ್ಲಾ ಪರ ವಕಾಲತ್ತು ವಹಿಸುವ ವಕೀಲ ಮೊಹಮ್ಮದ್ ತಾಜುಲ್ ಇಸ್ಲಾಂ ಇದೀಗ ಹೇಳಿಕೆ ನೀಡಿದ್ದಾರೆ.
ಶೇಖ್ ಹಸೀನಾ ವಿರುದ್ಧ ಬಾಂಗ್ಲಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ್ದಲ್ಲದೆ ಮತ್ತೊಂದು ಆದೇಶವನ್ನೂ ಹೊರಡಿಸಿದೆ. ಈ ಆದೇಶದ ಪ್ರಕಾರ ಶೇಖ್ ಹಸೀನಾ ಅವರು ನವೆಂಬರ್ 18ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು. ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದ ಘಟನೆಗಳಲ್ಲಿ 230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಅವಾಮಿ ಲೀಗ್ ಸರ್ಕಾರದ ಪತನದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು.