Ballari (Bellary) : ಕಡೇ ಕಾರ್ತೀಕೋತ್ಸವದ (Kartikotsava) ಅಂಗವಾಗಿ ಅರಸೀಕೆರೆ (Arsikere) ಗ್ರಾಮದಲ್ಲಿ ದಂಡಿನ ದುರ್ಗಮ್ಮದೇವಿ ಜಾತ್ರೆ (Dandina Durga Devi Temple Jathre) ಭಾನುವಾರ ನಡೆಯಿತು. ದೇವರ ಕೇಲುಗಳನ್ನು ಹೊತ್ತ ಪೂಜಾರಿ ಪಾದಸ್ಪರ್ಶದಿಂದ ಕಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇರುವುದರಿಂದ Covid-19 ಆತಂಕದ ನಡುವೆಯೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬಂದಿದ್ದರು.
ಜಿಲ್ಲಾಡಳಿತ ಸೂಚನೆಯಂತೆ ಸೀಮಿತ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಗಂಗಾಪೂಜೆಗೆ ಬೆಳಿಗ್ಗೆ 4 ಗಂಟೆಗೆ ದೇಗುಲದಿಂದ ದಂಡಿನ ದುರ್ಗಮ್ಮ ದೇವಿ ಉತ್ಸವ ಮೂರ್ತಿಯನ್ನು 1.5 km ದೂರವಿರುವ ಹೊಂಡಕ್ಕೆ ಭಜನೆ, ಮಂಗಳವಾದ್ಯಗಳೊಂದಿಗೆ ತರಲಾಯಿತು. ಪೂಜೆ ಮುಗಿಸಿ ದೇವಿಯ ಕೇಲು ಹೊತ್ತ ಇಬ್ಬರು ಪೂಜಾರಿಗಳು ದಾರಿಯುದ್ದಕ್ಕೂ ಮಲಗಿದ್ದ ಭಕ್ತರ ಮೈಮೇಲೆ ನಡೆಯುತ್ತಾ ಸಾಗಿದರು.
ಪ್ರಾಣಿ ಬಲಿ ನಿಷೇಧ ಕಾನೂನು ಜಾರಿಯಾಗಿರುವುದರಿಂದ ಹಲವು ವರ್ಷಗಳಿಂದ ಪ್ರಾಣಿ ಬಲಿಯನ್ನು ಜಾತ್ರೆಯಲ್ಲಿ ನಿಷೇಧಿಸಲಾಗಿದೆ.