
Satellite Technology Day: ಇಂದು ದೇಶದ ಮೊದಲ ಉಪಗ್ರಹ ಆರ್ಯಭಟನ್ನು (Aryabhata) ಬಾಹ್ಯಾಕಾಶಕ್ಕೆ ಕಳುಹಿಸಿದ ದಿನವನ್ನು ಸ್ಮರಿಸಿ, ಸ್ಯಾಟಲೈಟ್ ಟೆಕ್ನಾಲಜಿ ದಿನವನ್ನು (Satellite Technology Day) ಆಚರಿಸಲಾಗುತ್ತಿದೆ. 1975ರ ಏಪ್ರಿಲ್ 19ರಂದು, ಭಾರತದ ಮೊದಲ ಉಪಗ್ರಹ ಆರ್ಯಭಟನು ಸೋವಿಯತ್ ಕಾಸ್ಮೋಸ್-3 ಎಂ ರಾಕೆಟ್ ಮೂಲಕ ಕಪುಸ್ಟಿನ್ ಯಾರ್ ನಿಂದ ಉಡಾವಣೆಯಾಗಿತ್ತು.
ಆರ್ಯಭಟ: ಭಾರತದ ಮೊದಲ ಉಪಗ್ರಹ
- ಉಡಾವಣಾ ದಿನಾಂಕ: 19 ಏಪ್ರಿಲ್ 1975
- ಉಡಾವಣಾ ಸ್ಥಳ: ಕಪೂಸ್ಟಿನ್ ಯಾರ್, ರಷ್ಯಾ
- ಮಿಷನ್ ಉದ್ದೇಶ: ವೈಜ್ಞಾನಿಕ/ಪ್ರಾಯೋಗಿಕ ಸಂಶೋಧನೆ
- ತೂಕ: 360 ಕೆಜಿ
- ಕಮ್ಯುನಿಕೇಶನ್: VHF ಬ್ಯಾಂಡ್
- ಆನ್ಬೋರ್ಡ್ ಪವರ್: 46 ವ್ಯಾಟ್ಸ್
- ಪೇಲೋಡ್: ಎಕ್ಸ್-ರೇ ಖಗೋಳಶಾಸ್ತ್ರ, ವಾಯುವಿಜ್ಞಾನ ಮತ್ತು ಸೌರ ಭೌತಶಾಸ್ತ್ರ
ಆರ್ಯಭಟನ ಸ್ಥಾಪನೆಯೊಂದಿಗೆ ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮಹತ್ವದ ಹೆಜ್ಜೆ ಹಾಕಿತು. ಇದು ಭಾರತಕ್ಕೆ ದೇಶಾದ್ಯಾಂತ ಮತ್ತು ಜಗತ್ತಿನಾದ್ಯಾಂತ ಗೌರವ ಪಡೆದ ಮಹತ್ವಪೂರ್ಣ ಸಾಧನೆಯಾಗಿದೆ.
ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಈ ಉಪಗ್ರಹವನ್ನು ವಿನ್ಯಾಸಗೊಳಿಸಿ, ಅದನ್ನು ಸೋವಿಯತ್ ಒಕ್ಕೂಟದೊಂದಿಗೆ ಸಹಭಾಗಿತ್ವದಲ್ಲಿ ಉಡಾಯಿಸಿತು. ಇದರ ಸಹಾಯದಿಂದ ಭಾರತವು ಬಾಹ್ಯಾಕಾಶ ಪ್ರವೇಶ ಪಡೆದ ಮೊದಲ ಹಲವು ರಾಷ್ಟ್ರಗಳಲ್ಲಿ ಸೇರಿತು.
ಭಾರತದ ಬಾಹ್ಯಾಕಾಶ ಸಂಶೋಧನೆಗೆ ಮಹತ್ವದ ಕೇಂದ್ರವಾದ ಯು.ಆರ್.ರಾವ್ ಉಪಗ್ರಹ ಕೇಂದ್ರವು ಇಸ್ರೋನ ಪ್ರಮುಖ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. ಇದು ವಿವಿಧ ಬಾಹ್ಯಾಕಾಶ ಮಿಷನ್ ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಹೊಣೆಗಾರಿಕೆ ವಹಿಸುತ್ತದೆ.
ಆರ್ಯಭಟ ಮತ್ತು ಅದರ ಇತಿಹಾಸ
ಆರ್ಯಭಟವು ಭಾರತದ ಬಾಹ್ಯಾಕಾಶ ಶಕ್ತಿಯ ಮೊದಲ ಹಂತವನ್ನು ತಲುಪಿದ ಉಪಗ್ರಹವಾಗಿತ್ತು. ಇದರ ಯಶಸ್ವಿ ಉಡಾವಣೆ ಮುಂದಿನ ಬಾಹ್ಯಾಕಾಶ ಸಂಶೋಧನೆಗಳಿಗೆ ದಾರಿ ತೆರೆಯಿತು. 1990 ರ ದಶಕದಲ್ಲಿ ಭಾರತದ ರಿಸರ್ವ್ ಬ್ಯಾಂಕ್ ಈ ಐತಿಹಾಸಿಕ ಘಟನೆಯನ್ನು ಆಚರಿಸಿದ ಹಿನ್ನೆಲೆಯಲ್ಲಿ ಹೊಸ ರೂ. 2 ನೋಟುಗಳನ್ನು ಬಿಡುಗಡೆ ಮಾಡಿತು.
ಆರ್ಯಭಟವು 5ನೇ ಶತಮಾನದ ಭಾರತೀಯ ಖಗೋಳಶಾಸ್ತ್ರಜ್ಞ ಆರ್ಯಭಟನ ಹೆಸರಿನಲ್ಲಿ ಹೆಸರಿಸಲಾಗಿದೆ.