ಕೇಂದ್ರ ಸರ್ಕಾರ (central government) ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (DPDP-Digital Personal Data Protection) ನಿಯಮಗಳ ಕರಡನ್ನು ಬಿಡುಗಡೆ ಮಾಡಿದ್ದು, ಇವು ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಕೇಳಿದೆ. ಇದರ ಬಗ್ಗೆ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಕರಡು ನಿಯಮಗಳು ಸಮಾಲೋಚನೆಗಾಗಿ ಮುಕ್ತವಾಗಿವೆ ಮತ್ತು ಸಾರ್ವಜನಿಕರು ಫೆಬ್ರವರಿ 18, 2025 ರ ನಂತರ ತಮ್ಮ ಅಭಿಪ್ರಾಯಗಳನ್ನು ಹಂಚಬಹುದು. ಈ ನಿಯಮಗಳು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆಗೆ ಸಂಬಂಧಿಸಿದಂತೆ ಜನರ ಒಪ್ಪಿಗೆಯನ್ನು ಪಡೆಯುವುದು ಮತ್ತು ಡೇಟಾ ಸಂಸ್ಕರಣಾ ಸಂಸ್ಥೆಗಳ ಕಾರ್ಯವಿಧಾನವನ್ನು ನಿರ್ಧರಿಸುವುದರಲ್ಲಿ ಮಹತ್ವವನ್ನು ಹೊಂದಿವೆ.
ಕರಡು ನಿಯಮಗಳನ್ನು ಪರಿಗಣಿಸಿದ ನಂತರ, ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದಾಗ್ಯೂ, ಪ್ರಸ್ತುತ ಕರಡಿನಲ್ಲಿ ನಿಯಮ ಉಲ್ಲಂಘನೆಗಾಗಿ ದಂಡ ಅಥವಾ ಶಿಕ್ಷೆಗೆ ಸಂಬಂಧಿಸಿದ ಉಲ್ಲೇಖವಿಲ್ಲ.