back to top
26.6 C
Bengaluru
Tuesday, September 16, 2025
HomeNewsAsia Cup 2025: ಭಾರತ ತಂಡದ ಭರ್ಜರಿ ಗೆಲುವು

Asia Cup 2025: ಭಾರತ ತಂಡದ ಭರ್ಜರಿ ಗೆಲುವು

- Advertisement -
- Advertisement -

Dubai: ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 7 ವಿಕೆಟ್ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 127 ರನ್ ಗಳಿಸಿತು. ಸಾಹಿಬ್ಜಾದಾ ಫರ್ಹಾನ್ (40) ಮತ್ತು ಶಾಹೀನ್ ಅಫ್ರಿದಿ (33) ಮಾತ್ರ ಸ್ವಲ್ಪ ಹೋರಾಟ ತೋರಿದರು. ಉಳಿದ ಬ್ಯಾಟ್ಸ್ಮನ್‌ಗಳು ಡಬಲ್ ಡಿಜಿಟ್ ಕೂಡ ತಲುಪಲಿಲ್ಲ. ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ಅಕ್ಷರ್ ಪಟೇಲ್ ಮತ್ತು ಬೂಮ್ರಾ ತಲಾ 2 ವಿಕೆಟ್ ಕಬಳಿಸಿದರು.

  • 128 ರನ್ ಗುರಿ ಬೆನ್ನತ್ತಿದ ಭಾರತ, 15.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು.
  • ಅಭಿಷೇಕ್ ಶರ್ಮಾ: 31 ರನ್ (13 ಎಸೆತ, 2 ಸಿಕ್ಸರ್, 4 ಬೌಂಡರಿ)
  • ಸೂರ್ಯ ಕುಮಾರ್ ಯಾದವ್: 47 ರನ್ (ನಾಟೌಟ್)
  • ತಿಲಕ್ ವರ್ಮಾ: 31 ರನ್
  • ಶಿವಂ ದುಬೆ: 7 ರನ್ (ನಾಟೌಟ್)

ಪಂದ್ಯಕ್ಕೆ ವಿಶೇಷತೆ

  • ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಇದೇ ಮೊದಲು ನಡೆದಿತ್ತು.
  • ಈ ಪಂದ್ಯಕ್ಕೂ ಮುನ್ನ ಭಾರತವು ಯುಎಇ ವಿರುದ್ಧ ಹಾಗೂ ಪಾಕಿಸ್ತಾನವು ಒಮಾನ್ ವಿರುದ್ಧ ಜಯ ಗಳಿಸಿದ್ದವು.
  • ಸಂಕ್ಷಿಪ್ತ ಸ್ಕೋರ್
  • ಪಾಕಿಸ್ತಾನ: 127/9 (20 ಓವರ್)
  • ಭಾರತ: 131/3 (15.5 ಓವರ್)

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page