ಇಂದು ಏಷ್ಯಾ ಕಪ್ 2025 ರ (Asia Cup) 11ನೇ ಲೀಗ್ ಪಂದ್ಯದಲ್ಲಿ ಬಿ ಗುಂಪಿನ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗುತ್ತಿವೆ. ಪಂದ್ಯ ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ, ಅವರು ಸೂಪರ್ ಫೋರ್ ಗೆ ಅರ್ಹರಾಗಲಿದ್ದಾರೆ.
ಗ್ರೂಪ್ ಬಿ ಗುಂಪಿನಿಂದ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳು ಸೂಪರ್ ಫೋರ್ ಗೆ ಹೋರಾಟ ನಡೆಸುತ್ತಿವೆ. ಇಂದು ಪಂದ್ಯದಲ್ಲಿ ಮುನ್ನಡೆಯುವ ಎರಡು ತಂಡಗಳು ನಿರ್ಧಾರವಾಗಲಿದೆ. ಅಫ್ಘಾನಿಸ್ತಾನ ದೊಡ್ಡ ಅಂತರದಿಂದ ಜಯಿಸಿದರೆ, ಉತ್ತಮ ರನ್ ರೇಟ್ ಕಾರಣದಿಂದ ಸೂಪರ್ ಫೋರ್ ಗೆ ಹೋಗಬಹುದು.
ಅಫ್ಘಾನಿಸ್ತಾನ ಮೊದಲ ಲೀಗ್ ಪಂದ್ಯದಲ್ಲಿ ಹಾಂಗ್ ಕಾಂಗ್ ಗೆ ಜಯಿಸಿದ್ದು, ಬಾಂಗ್ಲಾದೇಶ ವಿರುದ್ಧ ಸೋಲಿಸಿದೆ. ಸೂಪರ್ ಫೋರ್ ಗೆ ಅರ್ಹತೆ ಪಡೆಯಲು ಇಂದು ಗೆಲುವು ಅವಶ್ಯಕ. ಬ್ಯಾಟಿಂಗ್ ತಂಡದಲ್ಲಿ ರಹಮಾನುಲ್ಲ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಸೆದಿಕುಲ್ಲ ಅಟಲ್, ಕರೀಮ್ ಜನತ್ ಮತ್ತು ಅಶ್ಮತುಲ್ಲಾ ಒಮರ್ಝಾಯಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲಿ ರಶೀದ್ ಖಾನ್, ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್, ಅಲ್ಲಾ ಖಾಜನ್ಫರ್ ಪ್ರಮುಖ ಆಟಗಾರರು.
ಅಂತರಾಷ್ಟ್ರೀಯ ಟಿ20 ನಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ 8 ಬಾರಿ ಮುಖಾಮುಖಿಯಾಗಿವೆ. ಶ್ರೀಲಂಕಾ 5 ಬಾರಿ ಗೆದ್ದಿದ್ದು, ಅಫ್ಘಾನಿಸ್ತಾನ 3 ಬಾರಿ ಜಯಿಸಿದೆ.
ಪಿಚ್ ವರದಿ: ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣವು ಸ್ಪಿನ್ನರ್ ಗೆ ಸಹಾಯಕವಾಗಿದೆ. ಮೊದಲ ಬ್ಯಾಟ್ ಮಾಡಿದ ತಂಡಗಳು 44 ಬಾರಿ ಗೆದ್ದರೆ, ಚೇಸಿಂಗ್ ಮಾಡಿದ ತಂಡಗಳು 51 ಬಾರಿ ಗೆದ್ದಿವೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಬಹುದು.
ತಂಡಗಳು, ಅಫ್ಘಾನಿಸ್ತಾನ: ಸೇದಿಕುಲ್ಲಾ ಅಟಲ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಅಶ್ಮತುಲ್ಲಾ ಉಮರ್ಝಾಯಿ, ಕರೀಮ್ ಜನತ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ಎಎಮ್ ಗಜನ್ಫರ್, ಫಾರುಕಿ.
ಶ್ರೀಲಂಕಾ: ಪಾತುಮ್ ನಿಸಂಕಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಕಮಿಲ್ ಮಿಶ್ರಾ, ಕುಸಾಲ್ ಪೆರೇರಾ, ಚರಿತ್ ಅಸಲಂಕಾ (ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ಮಹೇಶ್ ತೀಕ್ಷಣ, ದುಸ್ಮಂತ ಚಮೀರ, ನುವಾನ್ ತುಷಾರ.







