back to top
21.5 C
Bengaluru
Wednesday, September 17, 2025
HomeBusinessAsian Development Bank ಭಾರತದ ನಗರ ಸೌಕರ್ಯಗಳಿಗೆ $10 ಬಿಲಿಯನ್ ನೆರವು ಘೋಷಣೆ

Asian Development Bank ಭಾರತದ ನಗರ ಸೌಕರ್ಯಗಳಿಗೆ $10 ಬಿಲಿಯನ್ ನೆರವು ಘೋಷಣೆ

- Advertisement -
- Advertisement -

ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB-Asian Development Bank) ಮುಂದಿನ 5 ವರ್ಷಗಳಲ್ಲಿ ಭಾರತದ ನಗರಗಳಿಗೆ, ಮೆಟ್ರೋ ವಿಸ್ತರಣೆ ಸೇರಿದಂತೆ, 10 ಬಿಲಿಯನ್ US ಡಾಲರ್ ಹಣಕಾಸು ನೀಡಲು ನಿರ್ಧರಿಸಿದೆ. ಎಡಿಬಿ ಅಧ್ಯಕ್ಷ ಮಸಾಟೊ ಕಾಂಡಾ ಈ ಘೋಷಣೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಮಾಡಿದ್ದಾರೆ.

ಕಾಂಡಾ ಹೇಳುವಂತೆ, ನಗರಗಳು ದೇಶದ ಬೆಳವಣಿಗೆಯ ಇಂಜಿನ್. ಈ ಬಂಡವಾಳದಿಂದ 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಹಾಯವಾಗಲಿದೆ.

ಎಡಿಬಿ ಭಾರತದಲ್ಲಿ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು ನಗರ ಸವಾಲುಗಳ ನಿಧಿ (UCF) ಯೋಜನೆಯನ್ನು ಬೆಂಬಲಿಸುತ್ತದೆ. 100ಕ್ಕೂ ಹೆಚ್ಚು ನಗರಗಳಲ್ಲಿ ನವೀಕರಣ ಮತ್ತು ಪುನರಾಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ರಾಜ್ಯಗಳು ಮತ್ತು ನಗರ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸಲು 3 ಮಿಲಿಯನ್ ಡಾಲರ್ ತಾಂತ್ರಿಕ ಸಹಾಯ ನೀಡುತ್ತಿದೆ.

ನಗರಗಳ ಜನಸಂಖ್ಯೆ 2030ರೊಳಗೆ ಒಟ್ಟು ಜನರ 40% ಹೆಚ್ಚಾಗಲಿದೆ. ಇದಕ್ಕಾಗಿ ಎಡಿಬಿ ಈಗಾಗಲೇ 22 ರಾಜ್ಯಗಳ 110ಕ್ಕೂ ಹೆಚ್ಚು ನಗರಗಳಲ್ಲಿ ನೀರು, ನೈರ್ಮಲ್ಯ, ವಸತಿ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಸಹಾಯ ಮಾಡುತ್ತಿದೆ.

ನಗರ ಸಾರಿಗೆ ಅಭಿವೃದ್ಧಿಗಾಗಿ, ಎಡಿಬಿ 8 ನಗರಗಳಲ್ಲಿ 300 ಕಿಲೋ ಮೀಟರ್ ಗಳ ಮೆಟ್ರೋ ಮತ್ತು RRTS ಯೋಜನೆಗಳಿಗೆ 4 ಬಿಲಿಯನ್ ಡಾಲರ್ ಮೀಸಲಿಟ್ಟಿದ್ದು, ದಟ್ಟಣೆ ಹಾಗೂ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆಯೆಂದು ಹೇಳಲಾಗಿದೆ.

ಈ ಯೋಜನೆಗಳಿಂದ ಅಂಗವಿಕಲರು ಮತ್ತು ದುರ್ಬಲರು ಕೂಡ ಸುಲಭವಾಗಿ ಪ್ರಯಾಣಿಸಬಹುದಾಗುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page