back to top
20.6 C
Bengaluru
Tuesday, July 15, 2025
HomeKarnatakaKolar ದಲ್ಲಿ ATM ದರೋಡೆ: ಖದೀಮರು 27 ಲಕ್ಷ ರೂ. ದೋಚಿದ ಪ್ರಕರಣ

Kolar ದಲ್ಲಿ ATM ದರೋಡೆ: ಖದೀಮರು 27 ಲಕ್ಷ ರೂ. ದೋಚಿದ ಪ್ರಕರಣ

- Advertisement -
- Advertisement -

Kolar: ಇತ್ತೀಚೆಗೆ ಕರ್ನಾಟಕದಲ್ಲಿ ಬ್ಯಾಂಕ್ ಹಾಗೂ ATM ದರೋಡೆ (ATM robbery) ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಇದೀಗ ಕೋಲಾರದಲ್ಲಿ ಮತ್ತೊಂದು ATM ಕಳ್ಳತನ ನಡೆದಿದೆ.

ಕೋಲಾರ ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ATM  ಮಷೀನ್‌ನಿಂದ ಅಪರಿಚಿತ ಖದೀಮರು ಸುಮಾರು 27 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ATM ಗಲ್ ಪೇಟೆ ಪೊಲೀಸ್ ಠಾಣೆ ಸಮೀಪದಲ್ಲಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ, ಕೋಲಾರ ಎಸ್‌ಪಿ ನಿಖಿಲ್ ಸೇರಿದಂತೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜ್ಯದ ಇತರ ಭಾಗಗಳಲ್ಲಿ ಈಗಾಗಲೇ ಹಲವಾರು ATM ಕಳ್ಳತನ ಪ್ರಕರಣಗಳು ನಡೆದಿದ್ದು, ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಕೆಲವರು ಇನ್ನೂ ಪರಾರಿಯಾಗಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page