
ಬೆಂಗಳೂರು (Bengaluru) ಆರೋಗ್ಯ ಇಲಾಖೆ ರಸ್ತೆಯಲ್ಲಿನ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದಾಗ, ಇಡ್ಲಿಯಲ್ಲಿನ ಪ್ಲಾಸ್ಟಿಕ್ (plastic) ಕವರ್ ಬಳಕೆಯ ಮಾಹಿತಿ ಬೆಳಕಿಗೆ ಬಂದಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಕ್ಯಾನ್ಸರ್ ಸಮಸ್ಯೆ ತರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆರೋಗ್ಯ ಇಲಾಖೆ ನಗರದಲ್ಲಿ ಹಲವೆಡೆ ಹೋಟೆಲ್ ತಪಾಸಣೆ ನಡೆಸಿ, ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನ ಪರಿಶೀಲಿಸಿದೆ. ಸಾರ್ವಜನಿಕರು ಈ ಅಭಿಯಾನವನ್ನು ಸ್ವಾಗತಿಸಿದ್ದಾರೆ.
ಪ್ಲಾಸ್ಟಿಕ್ ಮಾತ್ರವಲ್ಲ, ಹಸಿರು ಬಟಾಣಿಯಲ್ಲೂ ಕೃತಕ ಬಣ್ಣ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. 36 ಮಾದರಿಗಳಲ್ಲಿ 28ರಲ್ಲಿ ಕೃತಕ ಬಣ್ಣ ಅಂಶ ಕಂಡುಬಂದಿದೆ. ಈ ಬಣ್ಣವು ಕಿಡ್ನಿಗೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೃತಕ ಬಣ್ಣ ಬೆರಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ರಸ್ತೆಬದಿಯಲ್ಲಿ ಹಾಕಲಾಗುವ ಟ್ಯಾಟೂಗಳು ಸ್ಕಿನ್ ಕ್ಯಾನ್ಸರ್ ಹಾಗೂ ಇತರ ತ್ವಚಾ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ಈ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ.
ಹೋಟೆಲ್ ಮಾಲೀಕರು ಮತ್ತು ಆಹಾರ ಉತ್ಪಾದಕರು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಪದಾರ್ಥಗಳನ್ನಷ್ಟೇ ಬಳಸಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.