Melbourne: ಸರ್ಬಿಯಾದ ಟೆನಿಸ್ ಮಹಾರಾಜು ನೋವಾಕ್ ಜೋಕೋವಿಚ್ ಐತಿಹಾಸಿಕ 25ನೇ Grand Slam ಪ್ರಶಸ್ತಿಯ ಕಡೆಗೆ ಹಾರುತ್ತಿದ್ದಾರೆ. ಆಸ್ಟ್ರೇಲಿಯನ್ ಓಪನ್ (Australian Open) ಪುರುಷರ ಸಿಂಗಲ್ಸ್ ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿಗೆ ಕೇವಲ ಎರಡು ಹೆಜ್ಜೆ ದೂರದಲ್ಲಿ ಇದ್ದಾರೆ.
ಮಂಗಳವಾರ ಕ್ವಾರ್ಟರ್ ಫೈನಲ್ ನಲ್ಲಿ ಸ್ಪೇನಿನ ಕಾರ್ಲೋಸ್ ಆಲ್ಕರಜ್ ವಿರುದ್ಧ 4-6, 6-4, 6-3, 6-4 ಸೆಟ್ ಗೆಳಲ್ಲಿ ಜಯವಂದು 12ನೇ ಸೆಮಿಫೈನಲ್ ಪ್ರವೇಶಿಸಿದರು. ಈಗ 25ನೇ Grand Slam ಪ್ರಶಸ್ತಿಗೆ ಇನ್ನೂ ಎರಡು ಪಂದ್ಯಗಳು ಬಾಕಿ.
ಜರ್ಮನಿಯ ಜೈರವ್, ಕ್ವಾರ್ಟರ್ ಫೈನಲ್ನಲ್ಲಿ ಅಮೆರಿಕದ ಟಾಮಿ ಪಾಲ್ ವಿರುದ್ಧ ಗೆದ್ದರು. ಬೆಲಾರುಸ್ನ ಅರೈನಾ ಸಬಲೆಂಕಾ ಕ್ವಾರ್ಟರ್ ಫೈನಲ್ ನಲ್ಲಿ ರಷ್ಯಾದ ಅನಸ್ತಾಸಿಯಾಪಾವು ಚೆಂಕೊವನ್ನು 6-2, 2-6, 6-3ರಲ್ಲಿ ಸೋಲಿಸಿ ಸೆಮೀಫೈನಲ್‌ಗೆ ಪ್ರವೇಶಿಸಿದರು. ಮತ್ತೊಂದೆಡೆ, ಸ್ಪೇನಿನ ಪೌಲಾ ಬಡೋಸಾ ಅಮೆರಿಕದ ಕೊಕೊ ಗಾಫ್‌ನನ್ನು 7-5, 6-4ರಿಂದ ಸೋಲಿಸಿದರು.
ಮಿಶ್ರ ಡಬಲ್ಸ್: ರೋಹನ್ ಬೋಪಣ್ಣ ಮತ್ತು ಚೀನಾದ ಶ್ಯುಯಿ ಝಾಂಗ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ಭಾರತದೆದ್ದು ಸವಾಲು ಮುಕ್ತಾಯವಾಯಿತು.