Home Sports Tennis Tennis ಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ

Tennis ಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ

Indian Tennis star Sania Mirza Retirement Australian Open

ಬುಧವಾರ ನಡೆದ ಆಸ್ಟ್ರೇಲಿಯನ್ ಓಪನ್ 2022 (Australian Open 2022) ರ ಮಹಿಳಾ ಡಬಲ್ಸ್‌ನ (Women Doubles) ಮೊದಲ ಸುತ್ತಿನಲ್ಲಿ ಸೋತ ನಂತರ ಭಾರತದ ಪ್ರಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ತಮ್ಮ ನಿವೃತ್ತಿ (Retirement) ಯೋಜನೆಯನ್ನು ಘೋಷಿಸಿದ್ದಾರೆ. ಮಿರ್ಜಾ ಮತ್ತು ಉಕ್ರೇನಿಯನ್ ಜೊತೆಯಾಟಗಾರ್ತಿ ನಾಡಿಯಾ ಕಿಚೆನೊಕ್ ಅವರು 4-6, 6-7(5) ಸೆಟ್‌ಗಳಿಂದ ಸ್ಲೊವೇನಿಯಾದ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ವಿರುದ್ಧ ಸೋತರು.

ಸೋಲಿನ ನಂತರ, ಮಿರ್ಜಾ ಅವರು 2022 ತನ್ನ ಕೊನೆಯ ಸೀಸನ್ ಆಗಿರಲಿದ್ದು ವರ್ಷದ ಕೊನೆಯವರೆಗೂ ಆಡುವ ಇಂಗಿತವನ್ನು ತಿಳಿಸಿದರು.

“ಇದು ನನ್ನ ಕೊನೆಯ ಸೀಸನ್ ಎಂದು ನಾನು ನಿರ್ಧರಿಸಿದ್ದೇನೆ. ನಾನು ಅದನ್ನು ಪ್ರತಿ ವಾರ ಅವಲೋಕಿಸುತ್ತಿದ್ದೇನೆ. ಈ ಋತುವಿ ಕಡೆಯವರೆಗೂ ನಾನು ಆಡಬಹುದೇ ಎಂದು ಖಚಿತವಾಗಿಲ್ಲ, ಆದರೆ ನನಗೆ ಈ ವರ್ಷವನ್ನು ಪೂರ್ಣವಾಗಿ ಆಡುವ ಬಯಕೆ ಇದೆ”ಎಂದು ಮಿರ್ಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತರಿಂದ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version