Bengaluru: ಮೆಟ್ರೋ ಹಾಗೂ ಬಸ್ ದರ ಏರಿಕೆಯ ಬಳಿಕ ಈಗ ಆಟೋ ಮೀಟರ್ ದರ (Auto fare hike) ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು (ಮಾರ್ಚ್ 12) ಈ ಕುರಿತು ಮಹತ್ವದ ಸಭೆ ನಡೆಯಲಿದೆ.
ಆಟೋ ಚಾಲಕರು ಕನಿಷ್ಠ ದರವನ್ನು ₹30 ರಿಂದ ₹40ಕ್ಕೆ ಹಾಗೂ ಪ್ರತಿ ಕಿಲೋಮೀಟರ್ ದರವನ್ನು ₹15 ರಿಂದ ₹20ಕ್ಕೆ ಹೆಚ್ಚಿಸಲು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ವಿವಿಧ ಆಟೋ ಚಾಲಕರ ಸಂಘಟನೆಗಳು ಭಾಗವಹಿಸಲಿವೆ.
ಈ ಹಿಂದೆ, ಜನವರಿಯಲ್ಲಿ ರಾಜ್ಯ ಬಸ್ ದರ ಹಾಗೂ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರ ಹೆಚ್ಚಳವಾಗಿತ್ತು. ಈಗ ಮಾರ್ಚ್‌ನಲ್ಲಿ ಆಟೋ ದರ ಏರಿಕೆಯಾಗುವ ನಿರೀಕ್ಷೆ ಜನತೆಗೆ ಮತ್ತೊಂದು ಬಜೆಟ್ ಹೊಡೆತ ನೀಡಲಿದೆ.