ಬೇಸಿಗೆಯಲ್ಲಿ (summer) ಪ್ರತಿನಿತ್ಯ ಸೇವನೆ ಮಾಡುವ ಕೆಲವೊಂದು ಆಹಾರಗಳು ನಮಗೆ ತಿಳಿಯದ ರೀತಿಯಲ್ಲಿ ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ತಜ್ಞರ ಪ್ರಕಾರ, ಉಪ್ಪು ಮತ್ತು ಮಸಾಲೆಯು ಅಧಿಕವಾಗಿರುವ ಆಹಾರಗಳು, ಹಾಗೆಯೇ ಹುರಿದ ಮತ್ತು ಕರಿದ ಆಹಾರಗಳು ಬೇಸಿಗೆಗೆ ಸೂಕ್ತವಲ್ಲ. ಬದಲಿಗೆ, ಕಲ್ಲಂಗಡಿ, ಸೌತೆಕಾಯಿ, ಎಳನೀರು ಮತ್ತು ನಿಂಬೆ ರಸದಂತಹ ಹಣ್ಣು, ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಅಲ್ಲದೆ, ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡದಿದ್ದರೆ ಹೆಚ್ಚು ಲಾಭಕರ.
ಬೇಸಿಗೆಯಲ್ಲಿ ಸೇವನೆ ಮಾಡಬಾರದು ಎಂಬ ಕೆಲವು ಆಹಾರಗಳು
ಹೆಚ್ಚು ಉಪ್ಪಿರುವ ಆಹಾರಗಳು: ಉಪ್ಪು ಹೆಚ್ಚಿರುವ ಆಹಾರಗಳನ್ನು ಬೇಸಿಗೆಯಲ್ಲಿ ಕಡಿಮೆ ಮಾಡುವುದು ಒಳ್ಳೆಯದು. ಅತಿಯಾದ ಸೋಡಿಯಂ ಸೇವನೆಯು ದೇಹದ ನೀರಿನ ಅಂಶವನ್ನು ಕಡಿಮೆ ಮಾಡಬಹುದು ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಹುರಿದ ಆಹಾರಗಳು: ಬರ್ಗರ್, ಫ್ರೆಂಚ್ ಫ್ರೈಸ್, ಚಿಕನ್ ಫ್ರೈಸ್, ಬಜ್ಜಿ ಮೊದಲಾದ ಕರಿದ ಆಹಾರಗಳು ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ತೊಂದರೆ ಕೊಡುವುದರ ಜೊತೆಗೆ ದೇಹದ ನೀರಿನಾಂಶವನ್ನು ಕಡಿಮೆ ಮಾಡಬಹುದು.
ಕಾಫಿ: ಕಾಫಿಯಲ್ಲಿರುವ ಕ್ಯಾಫೀನ್ ದೇಹದ ತಾಪಮಾನವನ್ನು ಹೆಚ್ಚಿಸಿ ನಿರ್ಜಲೀಕರಣ ಉಂಟುಮಾಡಬಹುದು. ಆದ್ದರಿಂದ, ಬೇಸಿಗೆಯಲ್ಲಿ ಕಾಫಿ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ.
ಉಪ್ಪಿನಕಾಯಿ: ಉಪ್ಪಿನಕಾಯಿಗಳಲ್ಲಿ ಹೆಚ್ಚಾಗಿರುವ ಸೋಡಿಯಂ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು. ಇದರ ಜೊತೆಗೆ ಉಪ್ಪಿನಕಾಯಿ ಸೇವನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಒಣಹಣ್ಣುಗಳು: ಪೋಷಕಾಂಶ ಭರಿತವಾದರೂ, ಒಣಹಣ್ಣುಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಇದರಿಂದ ಬೇಸಿಗೆಯಲ್ಲಿ ಅಸ್ವಸ್ಥತೆ ಉಂಟಾಗಬಹುದು.
ಸೋಡಾ ಮತ್ತು ತಂಪು ಪಾನೀಯಗಳು: ಸೋಡಾ ಮತ್ತು ಶಕ್ಕರೆ ತುಂಬಿರುವ ತಂಪು ಪಾನೀಯಗಳು ತಾತ್ಕಾಲಿಕ ಶೀತಲತೆ ಕೊಟ್ಟರೂ, ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಮಸಾಲೆಯುಕ್ತ ಆಹಾರಗಳು: ಮಸಾಲೆಯಲ್ಲಿರುವ ಕ್ಯಾಪ್ಸೈಸಿನ್ ತ್ವಚೆಗೆ ಚಳಿ ಉಂಟುಮಾಡಿದರೂ, ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು.
ಸೂಚನೆ: ಈ ಮಾಹಿತಿಯು ಸಾಮಾನ್ಯ ಅರಿವಿಗಾಗಿ ನೀಡಲಾಗಿದೆ. ನೀವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.