back to top
23.6 C
Bengaluru
Monday, July 21, 2025
HomeKarnatakaChikkaballapuraಆದಿನಾರಾಯಣಸ್ವಾಮಿ ಅವರ 97ನೇ ಜಯಂತ್ಯುತ್ಸವ

ಆದಿನಾರಾಯಣಸ್ವಾಮಿ ಅವರ 97ನೇ ಜಯಂತ್ಯುತ್ಸವ

- Advertisement -
- Advertisement -

Bagepalli : ಬಾಗೇಪಲ್ಲಿ ತಾಲ್ಲೂಕಿನ ನಕ್ಕಲಪಲ್ಲಿ ಗ್ರಾಮದ ಗೋಗರ್ಭಗಿರಿ ಆಶ್ರಮ, ಮಾಕಿರೆಡ್ಡಿಪಲ್ಲಿ ಗ್ರಾಮದ ಆದಿನಾರಾಯಣಸ್ವಾಮಿ ಮಠ ಸೇರಿದಂತೆ ವಿವಿಧ ಮಠಗಳಲ್ಲಿ ಸುಜ್ಞಾಂನಪಲ್ಲಿ ಗ್ರಾಮದ ಅವಧೂತ ಆದಿನಾರಾಯಣಸ್ವಾಮಿ (Adinarayana Swamy Jayanthostava) ಅವರ 97ನೇ ಜಯಂತ್ಯುತ್ಸವ ಮತ್ತು ರಾಧನಾ ಮಹೋತ್ಸವ ಜರುಗಿತು.

ಆದಿನಾರಾಯಣಸ್ವಾಮಿ ಗದ್ದುಗೆಗೆ ಅರಿಶಿಣ, ಕುಂಕುಮ, ಎಲೆ, ಅಡಿಕೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿ ಪೂಜಿಸಲಾಯಿತು. ಮಠಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಭಕ್ತರು ಸರತಿಸಾಲಿನಲ್ಲಿ ನಿಂತು ಗದ್ದುಗೆ ಬಳಿ ಪ್ರಾರ್ಥನೆ ಸಲ್ಲಿಸಿದರು.

ಗಂಗಾಪೂಜೆ, ಕಳಾಶಾರಾಧನೆ, ಯಾಗಮಂಟಪ ಪೂಜೆ, ಕಂಕಣಧಾರಣೆ, ಗಣಪತಿ, ನವಗ್ರಹಪೂಜೆ ವಾಸ್ತುಪೂಜೆ, ಶಿವಲಿಂಗಗಳಿಗೆ ಅಭಿಷೇಕ, ರುದ್ರಾಭಿಷೇಕ, ಪೂರ್ಣಾಹುತಿ, ಮಹಾಮಂಗಾಳಹಾರತಿ ಸೇರಿ ವಿವಿಧ ಪೂಜಾ ಕೈಂಕರ್ಯ ನಡೆಯಿತು. ಮಠಕ್ಕೆ ಆಗಮಿಸಿದ ಭಕ್ತರಿಗೆ ಅನ್ನದಾಸೋಹ ಮಾಡಲಾಯಿತು. ಆಲಯದ ಮುಂದೆ ಅಯ್ಯಪ್ಪಸ್ವಾಮಿಯ ಭಜನೆ, ನಾಟಕ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

For Daily Updates WhatsApp ‘HI’ to 7406303366

The post ಆದಿನಾರಾಯಣಸ್ವಾಮಿ ಅವರ 97ನೇ ಜಯಂತ್ಯುತ್ಸವ appeared first on Chikkaballapur.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page