
Bajaj Freedom 125 ವಿಶ್ವದ ಮೊದಲ CNG ಮೋಟಾರ್ಸೈಕಲ್ ಆಗಿದ್ದು, ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.
ವಾಹನ್ ಪೋರ್ಟಲ್ ಮಾಹಿತಿಯ ಪ್ರಕಾರ, ಬಜಾಜ್ 50,047 ಯುನಿಟ್ ‘ಫ್ರೀಡಂ’ CNG ಬೈಕ್ ಮಾರಾಟಗೊಳಿಸಿ ಹೊಸ ದಾಖಲೆ ನಿರ್ಮಿಸಿದೆ. 2024ರ ಜುಲೈ 5ರಂದು ಬಿಡುಗಡೆಗೊಂಡ ಈ ಬೈಕ್, 9 ತಿಂಗಳೊಳಗೆ ಅರ್ಧ ಲಕ್ಷ ಮಾರಾಟ ಗಂಡು ದಾಖಲೆ ಬರೆದಿದೆ.
ಬಜಾಜ್ ಫ್ರೀಡಂ 125 ವಿಶೇಷತೆಗಳು
- ಬೆಲೆ: ₹90,272 – ₹1.10 ಲಕ್ಷ (ಎಕ್ಸ್-ಶೋರೂಂ)
- ವೇರಿಯೆಂಟ್ಸ್: ಡ್ರಮ್, ಡ್ರಮ್ ಎಲ್ಇಡಿ & ಡಿಸ್ಕ್ ಎಲ್ಇಡಿ
- ಬಣ್ಣಗಳು: ರೇಸಿಂಗ್ ರೆಡ್, ಸೈಬರ್ ವೈಟ್ ಮತ್ತಿತರ ಆಯ್ಕೆಗಳು
- ಎಂಜಿನ್: 125cc ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್/CNG
- ಫ್ಯುಯೆಲ್ ಟ್ಯಾಂಕ್: 2 ಲೀಟರ್ ಪೆಟ್ರೋಲ್ & 2 ಕೆಜಿ ಸಿಎನ್ಜಿ
- ಮೈಲೇಜ್: 330 Km
- ಅತ್ಯಾಧುನಿಕ ತಂತ್ರಜ್ಞಾನ: ಎಲ್ಇಡಿ ಹೆಡ್ಲೈಟ್, ಬ್ಲೂಟೂತ್ ಕನೆಕ್ಟಿವಿಟಿ, ಎಲ್ಸಿಡಿ ಡಿಸ್ಪ್ಲೇ
- ಸಸ್ಪೆನ್ಷನ್: ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗ ಲಿಂಕ್ಡ್ ಮೊನೊಶಾಕ್
- ಬ್ರೇಕ್: ಡಿಸ್ಕ್/ಡ್ರಮ್ ಆಯ್ಕೆ
ಬಜಾಜ್ ಫ್ರೀಡಂ 125 ತನ್ನ CNG ತಂತ್ರಜ್ಞಾನದಿಂದ ಗ್ರಾಹಕರ ಹೃದಯ ಗೆಲ್ಲುತ್ತಿದ್ದು, ಮುಂಬರುವ ತಿಂಗಳಲ್ಲಿ ಇನ್ನಷ್ಟು ದಾಖಲೆ ಬರೆಯುವ ಸಾಧ್ಯತೆ ಇದೆ!