ನೀವು ಯಾರಿಗೂ ಹಣ ಕಳಿಸಿಲ್ಲ, ಯಾವುದೇ ಮೆಸೇಜ್ ಬಂದಿಲ್ಲ, ಆದರೂ ನಿಮ್ಮ ಬ್ಯಾಂಕ್ ಖಾತೆಯಿಂದ(Bank Account) 236 ರೂಪಾಯಿ ಕಡಿತ ಆಗಿದೆಯಾ? ಈ ಸಮಸ್ಯೆ ಒಬ್ಬರಿಗೆ ಮಾತ್ರ ಅಲ್ಲ, ಹಲವರಿಗೂ ಎದುರಾಗುತ್ತಿದೆ. ನಿಜವಾದ ಕಾರಣ ಎಂದರೆ, ಹಣಕಾಸು ವರ್ಷ ಮುಗಿಯುತ್ತಿದ್ದಂತೆ SBI ಬ್ಯಾಂಕ್ ತನ್ನ ಎಟಿಎಂ ಕಾರ್ಡ್‌ಗಳಿಗೆ ವಾರ್ಷಿಕ ಶುಲ್ಕ ವಿಧಿಸುತ್ತಿದೆ.
SBI ಕಾರ್ಡ್ ಶುಲ್ಕ ವಿವರ
- ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಕಾರ್ಡ್: ₹236 (₹200+18% GST)
- ಯುವ, ಗೋಲ್ಡ್, ಕಾಂಬೊ, ಮೈ ಕಾರ್ಡ್: ₹250 + GST
- ಪ್ಲಾಟಿನಂ ಕಾರ್ಡ್: ₹350 + GST
- ಪ್ರೈಡ್ ಮತ್ತು ಪ್ರೀಮಿಯಂ ಕಾರ್ಡ್: ₹425 + GST
ಈ ಶುಲ್ಕ ನಿಮ್ಮ ಖಾತೆಯಿಂದ “ಖಾತೆ ನಿರ್ವಹಣಾ ಶುಲ್ಕ” ಹೆಸರಿನಲ್ಲಿ ಕಡಿತಗೊಳ್ಳುತ್ತದೆ. ಕೆಲವರಿಗೆ ಈ ಬಗ್ಗೆ ಮೆಸೇಜ್ ಬಂದಿರಬಹುದು.
ಯುಪಿಐ ವಹಿವಾಟಿನ ಹೊಸ ನಿಯಮ
- ಎಸ್‌ಬಿಐ ಯುಪಿಐ ಬಳಕೆದಾರರಿಗೆ ಹೊಸ ಮಿತಿ ವಿಧಿಸಿದೆ.
- ಒಬ್ಬ ಬಳಕೆದಾರ ದಿನಕ್ಕೆ ಗರಿಷ್ಠ 10 ವಹಿವಾಟು ಮಾತ್ರ ಮಾಡಬಹುದು.
- ಒಟ್ಟು ಹಣಕಾಸು ಮಿತಿ ₹1 ಲಕ್ಷ ಪ್ರತಿದಿನ.
- ಹೆಚ್ಚಿನ ವಹಿವಾಟು ಮಾಡಲು ಯೋನೋ ಆ್ಯಪ್ ಬಳಸಿ.
ನಿಮ್ಮ ಬ್ಯಾಂಕ್ ಖಾತೆಯಿಂದ ಯಾವುದೇ ಅನಿರೀಕ್ಷಿತ ಹಣ ಕಡಿತಗೊಂಡಿದೆಯಾ? ಇದಕ್ಕೆ ಮೇಲಿನ ಕಾರಣವಿರಬಹುದು. ಯಾವುದೇ ಅನುಮಾನ ಇದ್ದರೆ, ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ!