Delhi-NCR ಸೇರಿದಂತೆ ಹಲವೆಡೆ ಮಳೆಯಿಂದ ಹವಾಮಾನದಲ್ಲಿ (weather) ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಕೆಲವೊಮ್ಮೆ ತಂಪಾಗಿದ್ದರೂ, ಮಾರ್ಚ್ ತಿಂಗಳು ಬಂತು ಎಂದರೆ ಬಿಸಿಲು ತೀವ್ರವಾಗುತ್ತಿದೆ.
ಹವಾಮಾನ ಇಲಾಖೆ ಪ್ರಕಾರ, ಮುಂದಿನ 4-5 ದಿನಗಳಲ್ಲಿ ವಾಯುವ್ಯ ಭಾರತದಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಈಗ 31 ಡಿಗ್ರಿ ಉಷ್ಣಾಂಶವಿದ್ದು, ಮಾರ್ಚ್ ಕೊನೆ ವೇಳೆಗೆ 40 ಡಿಗ್ರಿಯಷ್ಟು ಹೆಚ್ಚಾಗಬಹುದು. ಜನರು ಹವಾಮಾನ ಬದಲಾವಣೆಯ ಬಗ್ಗೆ ಜಾಗರೂಕರಾಗಬೇಕೆಂದು ಇಲಾಖೆ ಎಚ್ಚರಿಸಿದೆ.