Bengaluru: ಬೇಸಿಗೆ ರಜೆ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೆ (Indian Railways) ಬೆಂಗಳೂರಿನಿಂದ ಮುಂಬೈ ಮತ್ತು ಕೋಲ್ಕತ್ತಾ (ಸಾಂತ್ರಗಚಿ) ಕಡೆಗೆ ವಿಶೇಷ ರೈಲುಗಳನ್ನು ನಡೆಸಲಿದೆ. ಈ ವಿಶೇಷ ರೈಲುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರಗಳನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ.
ಬೆಂಗಳೂರು-ಮುಂಬೈ ವಿಶೇಷ ರೈಲು ವೇಳಾಪಟ್ಟಿ
- ರೈಲು ಸಂಖ್ಯೆ 01013: ಸಿಎಸ್ಎಂಟಿ ಮುಂಬೈ – ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್
- ಪ್ರಯಾಣ ದಿನಗಳು: ಏಪ್ರಿಲ್ 5, 12, 19, 26, ಮೇ 3, 10, 17, 24, 31 ಮತ್ತು ಜೂನ್ 7, 14, 21, 28
- ಹೊರಟು: ಮುಂಬೈ ಸಿಎಸ್ಎಂಟಿ (ರಾತ್ರಿ 12.30)
- ತಲುಪುವ ಸಮಯ: ಬೆಂಗಳೂರು ಎಸ್ಎಂವಿಟಿ (ರಾತ್ರಿ 11.55)
- ರೈಲು ಸಂಖ್ಯೆ 01014: ಎಸ್ಎಂವಿಟಿ ಬೆಂಗಳೂರು – ಸಿಎಸ್ಎಂಟಿ ಮುಂಬೈ ವಿಶೇಷ ಎಕ್ಸ್‌ಪ್ರೆಸ್
- ಪ್ರಯಾಣ ದಿನಗಳು: ಏಪ್ರಿಲ್ 6, 13, 20, 27, ಮೇ 4, 11, 18, 25 ಮತ್ತು ಜೂನ್ 1, 8, 15, 22, 29
- ಹೊರಟು: ಬೆಂಗಳೂರು ಎಸ್ಎಂವಿಟಿ (ಬೆಳಿಗ್ಗೆ 4.40)
- ತಲುಪುವ ಸಮಯ: ಮುಂಬೈ ಸಿಎಸ್ಎಂಟಿ (ಮರುದಿನ ಬೆಳಿಗ್ಗೆ 4.05)
ಈ ರೈಲು ಎಲ್ಲಿ ನಿಲುಗಡೆ ಮಾಡಲಿದೆ?
ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಸತಾರಾ, ಕರಾಡ್, ಸಾಂಗ್ಲಿ, ಮೀರಜ್, ಕುಡಚಿ, ರಾಯಬಾಗ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ತುಮಕೂರು ಸೇರಿದಂತೆ ಹಲವಾರು ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.
ಸಾಂತ್ರಗಚಿ – ಯಶವಂತಪುರ ವಿಶೇಷ ರೈಲು ವೇಳಾಪಟ್ಟಿ
- ರೈಲು ಸಂಖ್ಯೆ 02863: ಸಾಂತ್ರಗಚಿ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್
- ಪ್ರಯಾಣ ದಿನಗಳು: ಏಪ್ರಿಲ್ 3, 10, 17, 24
- ಹೊರಟು: ಸಾಂತ್ರಗಚಿ (ಮಧ್ಯಾಹ್ನ 12.50)
- ತಲುಪುವ ಸಮಯ: ಯಶವಂತಪುರ (ಶನಿವಾರ ಬೆಳಿಗ್ಗೆ 12.55)
- ರೈಲು ಸಂಖ್ಯೆ 02864: ಯಶವಂತಪುರ – ಸಾಂತ್ರಗಚಿ ವಿಶೇಷ ಎಕ್ಸ್‌ಪ್ರೆಸ್
- ಪ್ರಯಾಣ ದಿನಗಳು: ಏಪ್ರಿಲ್ 5, 12, 19, 26
- ಹೊರಟು: ಯಶವಂತಪುರ (ಬೆಳಿಗ್ಗೆ 4.30)
- ತಲುಪುವ ಸಮಯ: ಸಾಂತ್ರಗಚಿ (ಭಾನುವಾರ ಮಧ್ಯಾಹ್ನ 1.25)
ನಿಲುಗಡೆಗಳು: ಖರಾಗ್ಪುರ, ಭುವನೇಶ್ವರ, ವಿಜಯವಾಡ, ಗುಂಟೂರು, ಅನಂತಪುರ, ಧರ್ಮಾವರಂ, ಹಿಂದೂಪುರ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಈ ರೈಲು ನಿಲ್ಲಲಿದೆ. ಪ್ರಯಾಣಿಕರು ಈ ವಿಶೇಷ ರೈಲುಗಳ ಸೌಲಭ್ಯವನ್ನು ಪಡೆದುಕೊಳ್ಳಬಹುದು.