back to top
26.3 C
Bengaluru
Friday, July 18, 2025
HomeNewsHi-tech ದುನಿಯಾ : Crypto ತೆಗೆದುಕೊಳ್ಳುತ್ತಿರುವ Chaiwala

Hi-tech ದುನಿಯಾ : Crypto ತೆಗೆದುಕೊಳ್ಳುತ್ತಿರುವ Chaiwala

- Advertisement -
- Advertisement -

Bengaluru : ರಸ್ತೆ ಬದಿಯ ಅಂಗಡಿಗಳಲ್ಲಿ PhonePe, GooglePay ಮತ್ತು ಇತರ UPI ನಲ್ಲಿ ಪಾವತಿಸುವುದು ಬಹಳ ಸಾಮನ್ಯವಾಗಿದೆ. ಇದೀಗ ಬೆಂಗಳೂರಿನಲ್ಲಿ ರಸ್ತೆ ಬದಿ ಚಹಾ ಮಾರುವ (Tea Stall) ವ್ಯಕ್ತಿಯೊಬ್ಬ, ಇಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ರೂಪದಲ್ಲೇ ಹಣ ಸ್ವೀಕರಿಸಲಾಗುವುದು ಎಂದು ಬೋರ್ಡ್‌ ಹಾಕಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಶುಭಂ ಸೈನಿ (Shubham Saini), ಎಂಬ BCA ವಿದ್ಯಾರ್ಥಿ ಕಾಲೇಜು ಬಿಟ್ಟು ಬೆಂಗಳೂರಿನ ರಸ್ತೆ ಬದಿ ಫ್ರಸ್ಟ್‌ರೇಟೇಡ್‌ ಡ್ರಾಪ್‌ಔಟ್‌ (Frustrated Dropout) ಎಂಬ ಹೊಸ ಚಹಾ ಅಂಗಡಿ ತೆರೆದಿದ್ದು ಅದರಲ್ಲಿ ಚಹಾ ಕುಡಿದವರು ಕ್ರಿಪ್ಟೋಕರೆನ್ಸಿ ರೂಪದಲ್ಲೂ ಹಣ ಪಾವತಿಸಬಹುದು ಎಂದು ಬೋರ್ಡ್‌ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.

“ನನ್ನ ಪಾಕೆಟ್‌ ಮನಿ ಹಾಗೂ ಉಳಿತಾಯ ಮಾಡಿದ್ದೆಲ್ಲ ಹಣವನ್ನು ಸೇರಿಸಿ ಸುಮಾರು 1.5 ಲಕ್ಷವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೆ. ಕೆಲವೇ ತಿಂಗಳುಗಳಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ 1000ಪಟ್ಟು ಏರಿಕೆ ಕಂಡು ಬಂದು 1.5 ಲಕ್ಷದ ಹೂಡಿಕೆ ಮಾಡಿದ್ದ ಕ್ರಿಪ್ಟೋ ವಾಲೆಟ್‌ 30 ಲಕ್ಷಕ್ಕೆ ಏರಿಕೆಯಾಯಿತು. ಈ ಹಣದಿಂದ ಐಷಾರಾಮಿ ಜೀವನ ನಡೆಸಬೇಕು ಎಂದುಕೊಂಡಿದ್ದೆ. ಆದರೆ ಮತ್ತೆ 2021 ಏಪ್ರಿಲ್‌ನಲ್ಲಿ ಕ್ರಿಪ್ಟೋ ದರದಲ್ಲಿ ಶೇ.90 ರಷ್ಟು ಕುಸಿತ ಕಂಡು ಬಂಡ ಹಿನ್ನೆಲೆ 30 ಲಕ್ಷಕ್ಕೇರಿಕೆಯಾಗಿದ್ದ ವ್ಯಾಲೆಟ್‌ ಮತ್ತೆ 1 ಲಕ್ಷಕ್ಕೆ ಇಳಿಕೆಯಾಯಿತು. ಒಂದೇ ರಾತ್ರಿ ನನ್ನ ಎಲ್ಲ ಕನಸುಗಳು ನುಚ್ಚು ನೂರಾದವು. ಖರ್ಚು ನೀಗಿಸಲು ಐಫೋನ್‌ ಕೂಡಾ ಮಾರಿದೆ. ಬಳಿಕ ಕಾಲೇಜು ಬಿಟ್ಟು ಚಹಾ ಅಂಗಡಿ ಉದ್ಯಮಕ್ಕೆ ಕೈಹಾಕಿದೆ” ಎಂದು ಶುಭಂ ಸೈನಿ ಹೇಳಿದರು.

ಖ್ಯಾತ ಉದ್ಯಮಿ ಹರ್ಷ್‌ ಗೋಯೆಂಕಾ (Harsh Goenka) ಟ್ವಿಟ್ಟರ್‌ನಲ್ಲಿ ಈತನ ಫೋಟೋವನ್ನು ಹಂಚಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಸೈನಿ, ‘ಧನ್ಯವಾದಗಳು. ನಮ್ಮ ಈ ಸಣ್ಣ ಉದ್ಯಮದಿಂದ ನಾವು ಹೊಸ ಭಾರತ ನಿರ್ಮಿಸುವಲ್ಲಿ ಕೈಜೋಡಿಸಲು ಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page