Home Karnataka Bengaluru Urban ಇನ್ನೂ 10 ದಿನಗಳ ಕಾಲ Goraguntepalya Flyover ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ

ಇನ್ನೂ 10 ದಿನಗಳ ಕಾಲ Goraguntepalya Flyover ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ

199
Bengaluru Tumkur Road Goraguntepalya Flyover Repair

Bengaluru : ಬೆಂಗಳೂರಿನ ಅತ್ಯಂತ ವಾಹನ ದಟ್ಟಣೆ ಇರುವ ತುಮಕೂರು ರಸ್ತೆಯ (Tumkur Road) Peenya Flyover ಎಲಿವೇಟೆಡ್‌ ಕಾರಿಡಾರ್‌ನ (ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಎರಡು ಪಿಲ್ಲರ್‌ಗಳನ್ನು ಸಂಪರ್ಕಿಸುವ ಕೇಬಲ್‌ನಲ್ಲಿ ಕಂಡುಬಂದಿರುವ ದೋಷ ಸರಿಪಡಿಸುವ ಕಾಮಗಾರಿ ಮುಂದುವರಿದಿದ್ದು, ಈ ಮೇಲ್ಸೇತುವೆ ಮೇಲೆ ಇನ್ನೂ 10 ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ ಎಂದು ಯಶವಂತಪುರ ಸಂಚಾರ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳ ಮನವಿ ಮೇರೆಗೆ ದುರಸ್ತಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನವರಿ 14ರ ತನಕ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ತಮ್ಮ Twitter ಮೂಲಕ ಯಶವಂತಪುರ ಸಂಚಾರ ಪೊಲೀಸರು (Yashavanthapura Traffic Police) ತಿಳಿಸಿದ್ದಾರೆ.

ಈ ರಸ್ತೆ ಉತ್ತರ ಭಾಗದಿಂದ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ನೈಸ್ ರಸ್ತೆ ಜಂಕ್ಷನ್‌ನಿಂದಲೇ (NICE Road Junction) ಸರ್ವಿಸ್ ರಸ್ತೆಗೆ ಹೊರಳುವ ವಾಹನಗಳು ಗೊರಗುಂಟೆಪಾಳ್ಯ (Goraguntepalya Signal) ಸಿಗ್ನಲ್‌ಗಳನ್ನು ದಾಟಿ ಬರಲು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಪ್ರತಿ ಜಂಕ್ಷನ್‌ ದಾಟಲು ಕನಿಷ್ಠ 20 ನಿಮಿಷ ಕಾಲ ಹಿಡಿಯುತ್ತಿದೆ. ರಸ್ತೆಯ ಎರಡು ಬದಿಯಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಪೊಲೀಸರೂ ಸಂಚಾರ ದಟ್ಟಣೆ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ.


Image: Yashavanthapura Traffic Police BTP

NO COMMENTS

LEAVE A REPLY

Please enter your comment!
Please enter your name here

You cannot copy content of this page